Ad Widget

ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ ಇಂದಾಜೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪತ್ರಕರ್ತರಾಗಿ ಹಾಗೂ ಸಂಘದ ಅಧ್ಯಕ್ಷರಾಗಿ ಪತ್ರಕರ್ತರ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮದ ಮೂಲಕ ಸಮಾಜಮುಖಿ ಕಾರ್ಯಕ್ರಮ ಸಂಘಟಿಸಿ ಮೆಚ್ಚುಗೆ ಗಳಿಸಿದ್ದರು. ಸುಳ್ಯದ ಮಡಪ್ಪಾಡಿ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು.

ಐವರ್ನಾಡಿನ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹಾಗೂ ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಅವರಿಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Ad Widget

ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹಾಗೂ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಗತಿಪರ ಕೃಷಿಕ ಐವರ್ನಾಡಿನ ವಿಶ್ವನಾಥ ಪೈ ಅವರಿಗೆ ಕೂಡ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ಆದೇಶಿಸಲಾಗಿದ್ದು, ಮರಕತ ಅರ್ಚಕರಾಗಿರುವ ಜಗದೀಶ್ ಭಟ್, ಸತೀಶ್ ಬಂಬುಲಿ, ರೋಹಿಣಿ ದೇರಪ್ಪಜ್ಜನಮನೆ, ಮೋಹನಾಂಗಿ ಉದೇರಿ, ಚಂದ್ರಶೇಖರ ಕೊರಂಬಟ, ಚಿನ್ನಪ್ಪ ಪಡ್ರೆ, ಶ್ಯಾಮಯ್ಯ ಎಚ್. ಚೆಮ್ನೂರು, ಚಂದ್ರಶೇಖರ ಬಾಳುಗೋಡು, ಹರಿಪ್ರಸಾದ್ ಕಲ್ಲಾಜೆ ಯವರನ್ನು ನೇಮಕಗೊಳಿಸಿದೆ.

ಅರಂಬೂರು ಬದ್ರ್ ಮಸೀದಿಯಲ್ಲಿ ಜುಮಃ ನಮಾಜ್ ಗೆ ಚಾಲನೆ

ಸುಳ್ಯ ಅರಂಬೂರು ಬದ್ರ್ ಮಸ್ಜಿದ್ ನಲ್ಲಿ ಹಲವಾರು ವರ್ಷಗಳಿಂದ ಮುಸಲ್ಮಾನ ಬಾಂಧವರು ದಿನದ ಐದು ಸಮಯದ ನಮಾಜ್ ನಿರ್ವಹಿಸಿಕೊಂಡು ಬರುತ್ತಿದ್ದರು. ಇದೀಗ ಈ ಮಸ್ಜಿದ್ ನಲ್ಲಿ ಶುಕ್ರವಾರ ದಿನದ ಸಾಮೂಹಿಕ ಜುಮ್ಮಾ ನಮಾಜ್ ನಿರ್ವಹಣೆಗೆ ಇಂದು ಚಾಲನೆ ನೀಡಲಾಯಿತು. ದಕ್ಷಿಣ ಕರ್ನಾಟಕ ಸಮಸ್ತ ಜಂಇಯ್ಯತ್ತುಲ್ ಉಲೇಮಾದ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರವರು...

ಬೆಳ್ಳಾರೆಯಲ್ಲಿ ಅಕ್ಷಯ ಪುಡ್ ಕೋರ್ಟ್ ಶುಭಾರಂಭ

ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಜಗನ್ನಾಥ ಪೂಜಾರಿ ದೋಳ್ಪಾಡಿ ( ಕಳೆಂಜೋಡಿ) ಮಾಲಕತ್ವದಲ್ಲಿ ಅಕ್ಷಯ ಪುಡ್ ಕೋರ್ಟ್ ಅ. 25 ರಂದು ಶುಭಾರಂಭಗೊಂಡಿತು. ಇಲ್ಲಿ ನಾನ್ ವೆಜ್ ಖಾದ್ಯಗಳು, ಬಾಳೆ ಎಲೆ ಊಟ, ಚಾ, ತಿಂಡಿ ಹಾಗೂ ಶುಚಿರುಚಿಯಾದ ಇನ್ನಿತರ ಖಾದ್ಯಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ವಳಲಂಬೆ : ಸಿನ್ಸಿಯರ್ ಆಯಿಲ್ ಮತ್ತು ಫುಡ್ಸ್ ಸಂಸ್ಥೆ ಶುಭಾರಂಭ

ವಳಲಂಬೆ ಜೈಮಿ ಮ್ಯಾಥ್ಯೂ ಅವರು ಆರಂಭಿಸಿರುವ "ಸಿನ್ಸಿಯರ್" ಆಯಿಲ್ ಮತ್ತು ಫುಡ್ಸ್ ಸಂಸ್ಥೆ ಅ. 29 ರಂದು ಶುಭಾರಂಭಗೊಂಡಿತು. ಸೈಂಟ್ ಮೇರಿಸ್ ಚರ್ಚ್ ಗುತ್ತಿಗಾರಿನ ಫಾದರ್ ಸನು ದೇವಶ್ಯ ಪ್ರಾರ್ಥನೆ ಸಲ್ಲಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಅಲ್ಪ ಸಂಖ್ಯಾತರ ಸೊಸೈಟಿ ಅಧ್ಯಕ್ಷ ಬಿಟ್ಟಿ ನೆಡುನೀಲಂ, ನಿರ್ದೇಶಕ ಲಿಜೋಜೋಸ್, ಗುತ್ತಿಗಾರು ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟ್...

ನಿಂತಿಕಲ್ಲು : ಸೋಲಾರ್ ಪವರ್ ಪ್ಲಸ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಷಲ್ ಆಫರ್

ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿರುವ ಧರ್ಮಶ್ರೀ ಆರ್ಕೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪವರ್ ಪ್ಲಸ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ಹಾಗೂ ಎಕ್ಸ್ ಚೇಂಜ್ ಆಫರ್ ಪ್ರಾರಂಭಗೊಂಡಿದೆ. ಸ್ಪೆಷಲ್ ಆಫರ್ ಪ್ರಯುಕ್ತ ಹಳೆ ಇನ್ವರ್ಟರನ್ನು ಹೊಸ ಇನ್ವರ್ಟರನ್ನಾಗಿ ಬದಲಾಯಿಸಬಹುದು. ಇನ್ವರ್ಟರ್ ಮತ್ತು ಬ್ಯಾಟರಿಗಳ ಮೇಲೆ 20 ರಿಂದ 50% ರಿಯಾಯಿತಿ ಇದ್ದು , 5...

ಮೊಗ್ರ- ಕಮಿಲ ಸಮಸ್ಯೆ ಕುರಿತು ಪ್ರಧಾನಿಗೆ ಟ್ವೀಟ್

ಗುತ್ತಿಗಾರು. ಅ.30: ಇಲ್ಲಿನ ಮೊಗ್ರ ಸೇತುವೆ ಹಾಗೂ ಕಮಿಲ ರಸ್ತೆಯ ದುರವಸ್ಥೆ ಕುರಿತಂತೆ ನಾಗರಿಕ ಹೋರಾಟ ಕ್ರಿಯಾ ಸಮಿತಿಯ ಪ್ರಮುಖ ಮಹೇಶ್ ಪುಚ್ಚಪ್ಪಾಡಿ ಪ್ರಧಾನಿಗೆ ಟ್ವೀಟ್ ಮಾಡಿದ್ದಾರೆ. ಮೊಗ್ರ ಸೇತುವೆ ರಚನೆಯ ಪ್ರಸ್ತಾವನೆ ಹಾಗೂ ಕಮಿಲ ಬಳ್ಪ‌ ಸಂಪರ್ಕ ರಸ್ತೆ ಅಭಿವೃದ್ಧಿ ಕಳೆದ ಹಲವು ನೆನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಶ್ವಾಸನೆ ನೀಡುವ ಹೊರತು ಬೇರಾವುದೇ...

ನ.9: ಕಸ್ತೂರಿ ರಂಗನ್ ಬಾಧಿತ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಗಳಿಂದ ಸರಕಾರಕ್ಕೆ ಮನವಿ ಸಲ್ಲಿಕೆಗೆ ತೀರ್ಮಾನ

ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದಾಗಿ ಬಾಧಿತವಾಗಲಿರುವ ಸುಳ್ಯ ತಾಲೂಕಿನ ೧೦ ಗ್ರಾಮ ಪಂಚಾಯತ್ ಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ನ‌.9 ರಂದು ಪ್ರತೀ ಗ್ರಾಮ ಪಂಚಾಯತ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಸಮಿತಿ ನಿರ್ಣಯಿಸಿದೆ.ಶುಕ್ರವಾರ ಗುತ್ತಿಗಾರಿನಲ್ಲಿ ಜರಗಿದ ಸುಳ್ಯ ತಾಲೂಕು ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ...
Loading posts...

All posts loaded

No more posts

error: Content is protected !!