ಸುಳ್ಯ : ಮಿಲಿಟರಿ ಗ್ರೌಂಡ್ – ಜಯನಗರ ರಸ್ತೆ ಉದ್ಘಾಟನೆ

ಸುಳ್ಯ ಕಸಬಾ ಗ್ರಾಮದ‌ ಮಿಲಿಟರಿ ಗ್ರೌಂಡ್ – ಜಯನಗರ ರಸ್ತೆ ಕಾಮಗಾರಿಯು ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭಾಹಾರೈಸಿದರು.
ರಸ್ತೆ ಉದ್ಘಾಟನಾ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ ಮಾಜಿ ಉಪಾಧ್ಯಕ್ಷ ಬುದ್ಧ ನಾಯ್ಕ್, ನ.ಪಂ.ಮಾಜಿ ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್, ಪ್ರಮುಖರಾದ ಶಿವನಾಥ ರಾವ್, ಕುಸುಮಾಧರ ಜಯನಗರ, ನಿಸರ್ಗ ಇಂಡಸ್ಟ್ರೀಸ್ ಮಾಲಕರಾದ ಕಸ್ತೂರಿಶಂಕರ್, ಸ್ಥಳೀಯ ಮುಖಂಡರುಗಳಾದ ಮಾಧವ ಜಯನಗರ, ರಾಧಾಕೃಷ್ಣ ನಾಯಕ್, ಜಯನಗರ, ಪ್ಲಂಬರ್ ಇಬ್ರಾಹಿಂ, ನಾರಾಯಣ ಶಾಂತಿನಗರ, ಸಚಿನ್ ಕೊಯಿಂಗೋಡಿ, ದಯಾನಂದ(ಮುದ್ದು), ನಾಗೇಶ್ ಜಯನಗರ, ಅಮಿತ್ ಜಯನಗರ, ಇಂಜಿನಿಯರ್ ರಕ್ಷಿತ್ ನಂದಗೋಕುಲ, ಹೊಸಗದ್ದೆ ಕಾಲನಿ ಸದಸ್ಯರು, ಊರವರು ಉಪಸ್ಥಿತರಿದ್ದರು. 
ಶಕ್ತಿ ಕೇಂದ್ರದ ಪ್ರಮುಖರಾದ ರಮೇಶ್ ಇರಂತಮಜಲು ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading