ಬಾಳಿಲ: ಪ್ರತಿಭಾ ಪುರಸ್ಕಾರ 2026

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಜೂನ್ 6 ರಂದು ಎಸ್ ಎಸ್ ಎಲ್ ಸಿ :2026ರ ವಾರ್ಷಿಕ ಪರೀಕ್ಷೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ: 2026 ನಡೆಯಿತು.

. . . . . . . . .

ವಿದ್ಯಾಸಂಸ್ಥೆ ಹಿರಿಯ ವಿದ್ಯಾರ್ಥಿ ಹಾಗೂ ಕರ್ನಾಟಕ ಬ್ಯಾಂಕ್ ಮಂಗಳೂರು ಕುಳಾಯಿ ಶಾಖೆಯ ಮ್ಯಾನೇಜರ್ ರಘುರಾಮ್ ವಿದ್ಯಾರ್ಥಿಗಳನ್ನು ಅಭಿನಂದಿಸಿ,
“ತಂದೆ ತಾಯಿ ,ಗುರುಗಳೇ ಎಲ್ಲರಿಗಿಂತಲೂ ಮುಖ್ಯ ಅವರನ್ನು ಗೌರವಿಸಿ ” ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಪ್ರತಿ ವರ್ಷವೂ BGB ಸ್ಕಾಲರ್‌ ಶಿಪ್ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ನೀಡುತ್ತಿರುವ ಪ್ರಶಾಂತ್ ಭಟ್ ಮಜಲುಕೆರೆ, ಹೆಡ್ ಪ್ರಾಡಕ್ಟ್ ಮ್ಯಾನೆಜ್ ಮೆಂಟ್ , ಮೇ ಬ್ಯಾಂಕ್ ಲಾಬ್ಸ್. ಇವರು ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು.

. . . . . . .

ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಸಂಸ್ಥೆಗಳ ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್,
ಆಡಳಿತ ಮಂಡಳಿಯ ಕೋಶಾಧಿಕಾರಿ ಕೈಂತಜೆ ರಾಮಭಟ್, ಪ್ರೌಢ ಶಾಲಾವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷೆ ಹರಿಣಾಕ್ಷಿ ಬರೆಮೇಲು, ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ರಮೇಶ್ ಕಾಚಿಲ, ಪ್ರಾಥಮಿಕ ಶಾಲಾ ವಿಭಾಗದ ಎಸ್ ಡಿ ಎಮ್ ಸಿ ಅಧ್ಯಕ್ಷ ಸೀತಾರಾಮ ಕಾಯಾರ ಉಪಸ್ಥಿತರಿದ್ದರು. SSLC ವಾರ್ಷಿಕ ಪರೀಕ್ಷೆಯಲ್ಲಿ ಶಾಲಾ
ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಛಾಯಾ ಮತ್ತು ಪ್ರಾಪ್ತಿ ಟಿ ಪುರಸ್ಕರಿಸಲಾಯಿತು. 500ಕ್ಕಿಂತ ಹೆಚ್ಚಿನ ಅಂಕ ಪಡೆದ 35 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಪ್ರತಿಭಾನ್ವಿತರ ಮೂರು ವರುಷದ ಸಾಧನೆಯೊಂದಿಗಿನ ವಿವರಣೆಯ ಪಟ್ಟಿಯನ್ನು ಸಹ ಶಿಕ್ಷಕಿ ಸಹನಾ ಬಿ. ಬಿ ವಾಚಿಸಿದರೆ,ದತ್ತಿನಿಧಿಯ ವಿವರಣೆಯನ್ನು ಸಹ ಶಿಕ್ಷಕ ಮೋಹನ್ ಕೆ ಸಿ ನೀಡಿದರು.ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸಹಶಿಕ್ಷಕ ಲೋಕೇಶ್ ಬಿ ವಂದನಾರ್ಪಣೆಗೈದರು. ಸಹಶಿಕ್ಷಕ ಶಶಿಧರ ಎಲ್.ಆರ್ ಕಾರ್ಯಕ್ರಮ ನಿರೂಪಿಸಿದರು .
ಇದೇ ಸಂದರ್ಭದಲ್ಲಿ ವಿಕ್ರಂರಾವ್, ಇಂಜಿನಿಯರ್,ರಷ್ಯಾ ಇವರು ಹೊಸದಾಗಿ ಸ್ಥಾಪಿಸಿರುವ VIMS ದತ್ತಿ ನಿಧಿಯನ್ನು 14 ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಯಿತು.

2025 – 26ನೇ ಸಾಲಿನ MMMS ಸ್ಕಾಲರ್ ಶಿಪ್ ಗೆ ಆಯ್ಕೆಯಾರ ಸೋವಿತ್ (8ನೆಯ ತರಗತಿ) ಇವರನ್ನು ಗೌರವಿಸಲಾಯಿತು.

ಶಾಲಾ ವಾರ್ಷಿಕ ಹಸ್ತಲಿಖಿತ
ಪುಸ್ತಕವನ್ನು ಸಂಚಾಲಕರು ಬಿಡುಗಡೆಗೊಳಿಸಿದರು. ಸಹಶಿಕ್ಷಕ ವೆಂಕಟೇಶ್ ಕುಮಾರ್ ಯು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಸ್ಥೆಯಲ್ಲಿ ಮುಖ್ಯ ಅಡುಗೆಯವರಾಗಿ ದೀರ್ಘಾವಧಿ ಕರ್ತವ್ಯ ನಿವ೯ಹಿಸಿ ನಿವೃತ್ತಿ ಹೊಂದಿದ ಜಯಲಕ್ಷ್ಮಿ ಕೆ. ಇವರನ್ನು ಸನ್ಮಾನಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading