ಕೊಚ್ಚಿ ಸಮೀಪ ಭೀಕರ ರಸ್ತೆ ಅಪಘಾತ: ಸುಳ್ಯದ ಯುವಕ ಸೇರಿ ಮೂವರು ಸಾವು

ಕನಕಮಜಲು: ಕೇರಳದ ಕೊಚ್ಚಿಯಲ್ಲಿ ಅ.11 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಕಮಜಲು ಗ್ರಾಮದ ಯುವಕ ಮೃತಪಟ್ಟ ಘಟನೆ ನಡೆದಿದೆ.

. . . . . . . . .

ಮೃತ ಯುವಕನನ್ನು ಕನಕಮಜಲು ಗ್ರಾಮದ ಇಬ್ರಾಹಿಂ ಪಿ.ಎ. ಅವರ ಪುತ್ರ ಇಯಾಸ್ ಎಂದು ಗುರುತಿಸಲಾಗಿದೆ.

. . . . . . .

ಘಟನೆಯ ವಿವರ :

ಕೇರಳದ ಕೊಚ್ಚಿ ಸಮೀಪದ ಅ.11 ರಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಸುಳ್ಯದ ಕನಕಮಜಲಿನ ಇಯಾಸ್, ಕೇರಳದ ದೇವಿಕಾ ಮತ್ತು ಗೋಪಿಕಾ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅತಿವೇಗದಲ್ಲಿ ಎದುರಿನಿಂದ ಬಂದ ಐಷಾರಾಮಿ ಕಾರು ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಡಿಕ್ಕಿಯ ತೀವ್ರತೆಗೆ ಸ್ಕೂಟರ್‌ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಡಿಕ್ಕಿಯ ರಭಸಕ್ಕೆ ಕಾರು ಸ್ಕೂಟರ್ ಅನ್ನು ಸುಮಾರು 100 ಮೀಟರ್‌ಗಳಷ್ಟು ಎಳೆದೊಯ್ದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟಿದ್ದಾರೆ.

ಇಯಾಸ್ ಅವರು ಕನಕಮಜಲು ಪೆಲ್ತಡ್ಕ ಇಬ್ರಾಹಿಂ ಅವರ ಪುತ್ರ. ಮೃತರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading