Ad Widget

ಮನೆಯಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾದ ಸುಳ್ಯದ ಅಮರ ಸಂಘಟನಾ ಸಮಿತಿ

ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡು ಮನೆಯೂ ಇಲ್ಲದೇ ಚಿಕ್ಕ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.

ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ನೇತೃತ್ವದಲ್ಲಿ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಣೂರು ಮಾಂತೂರು ರವೀಂದ್ರ ಆಚಾರ್ಯ ಅವರು ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇತ್ತೀಚೆಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ. ಅವರಿಗೆ 2 ಸಣ್ಣ ಮಕ್ಕಳಿದ್ದು ಪತ್ನಿಯೂ ಕೂಡ ಅನಾರೊಗ್ಯದಿಂದ್ದಾರೆ, ಪತ್ನಿ ಶ್ಯಾಮಲ ಅವರು ಬೀಡಿ ಕಟ್ಟಿ ತನ್ನ ಕುಟುಂಬವನ್ನು ಸಾಗಿಸುತ್ತಿದ್ದು, ಆಸ್ಪತ್ರೆಯ ಖರ್ಚನ್ನು ಭರಿಸಲು ಅದೇ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿಯ ತನಕ ವಾಸ್ತವ್ಯಕ್ಕಾಗಿ ತನ್ನ ಸಂಬಂಧಿಕರ ಮನೆಯನ್ನು ಅವಲಂಬಿಸಿದ್ದು, ಮಕ್ಕಳನ್ನು ಇನ್ನೊಬ್ಬರ ಮನೆಯಲ್ಲಿ ಬಿಟ್ಟಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಿರುತ್ತದೆ, ಹೀಗೆ ಹಲವಾರು ಸಮಸ್ಯೆಗಳಿಂದ ಕಷ್ಟಪಡುತ್ತಿರುವ ಈ ಬಡ ಕುಟುಂಬಟಕ್ಕೆ ಸ್ವಂತ ಮನೆಯಿಲ್ಲದೆ ಇರುವುದು ದೊಡ್ಡ ಸಮಸ್ಯೆ ಎಂದು ಮನಗಂಡಿರುವ ಅಮರ ಸಂಘಟನಾ ಸಮಿತಿ ಆ ಬಡಕುಟುಂಬಕ್ಕೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ಮನೆ ನಿರ್ಮಾಣ ಮಾಡಿ ಕೊಡುವ ನಿರ್ಧಾರ ಕೈಗೊಂಡಿದ್ದು ಮನೆಯ ಕೆಲಸ ಆರಂಭಗೊಂಡಿದೆ. ಈ ಕಾರ್ಯಕ್ಕೆ ಸಂಘಟನೆಯ ಜತೆಗೆ ಸಹೃದಯಿ ದಾನಿಗಳು ಬಡಕುಟುಂಬಕ್ಕೆ ಆಸರೆ ನೀಡಲು ಕೈಜೋಡಿಸಲು ಸಮಿತಿ ಮನವಿ ಮಾಡಿದೆ. ಸಹಾಯಧನ ಮಾಡುವವರು
ಗೂಗಲ್ ಪೇ ನಂಬರ್ 99001 06608 ಗೆ ನೀಡಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!