Ad Widget

ಪಂಜ: ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ದೇವಳದಲ್ಲಿ ದೀಪೋತ್ಸವ, ದೈವಗಳ ನರ್ತನ ಸೇವೆ, ಯಕ್ಷಗಾನ ಬಯಲಾಟ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಇಂದು(ಫೆ.05) ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವಳದಲ್ಲಿ ದೀಪೋತ್ಸವ, ಮಹಾಪೂಜೆ ನಡೆಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ವಸಂತಕಟ್ಟೆ ಪೂಜೆ, ಕಾಜುಕುಜುಂಬ ಹಾಗೂ ಶಿರಾಡಿ ದೈವಗಳ ನರ್ತನ ಸೇವೆ ನಡೆದು ಶ್ರೀ ದೇವರ ಉತ್ಸವ...

ಸಂಘಟನೆ ಹಾಗೂ ಸುಳ್ಯದ ಬೆಳವಣಿಗೆಗೆ ಶ್ರಮಿಸಿದ ಉಮೇಶ್ ವಾಗ್ಲೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ಸುಳ್ಯ ಬಿಜೆಪಿಯ ಹಿರಿಯ ಮುತ್ಸದ್ದಿ ,ಆದರ್ಶ ಕಾರ್ಯಕರ್ತ ಆರ್ ಉಮೇಶ್ ವಾಗ್ಲೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.5 ರಂದು ಸುಳ್ಯ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ "ಎಂದಿಗೂ ಅಚ್ಚಾಗಿ ಉಳಿಯುವಂತೆ ಮಾಡಿದ ಸಾಧಕ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯಿಂದ ಸಂಘಟನೆಯ...
Ad Widget

ವಳಲಂಬೆ : ಅನಾರೋಗ್ಯದಿಂದ ಯುವಕ ಮೃತ್ಯು

ಗುತ್ತಿಗಾರು ಗ್ರಾಮದ ವಳಲಂಬೆ ಕುವೆಕೋಡಿ ನಿವಾಸಿ ಶೂರಪ್ಪ ಟೈಲರ್ ಅವರ ಪುತ್ರ ಜಗದೀಶ್ (30) ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.4 ರಂದು ನಿಧನರಾದರು. ಮೃತರು ತಂದೆ, ತಾಯಿ ಮನೋರಮ, ಪತ್ನಿ ಲಾವಣ್ಯ, ಪುತ್ರಿ ಜ್ಞಾನ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಅನಾರೋಗ್ಯಕ್ಕೀಡಾಗಿರುವ ಅಚ್ಚುತ ಪಾಟಾಳಿಯವರಿಗೆ ಬೇಕಿದೆ ನೆರವಿನ ಹಸ್ತ

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ಕೋನಡ್ಕಪದವು ಅಚ್ಚುತ ಪಾಟಾಳಿ (47ವರ್ಷ) ಹಸಿ ಮೀನು ವ್ಯಾಪಾರ ಮಾಡುತ್ತಿದ್ದು ಇವರಿಗೆ ಮಾರಕ ಬಾಯಿಯ ಕ್ಯಾನ್ಸರ್ ಬಾಧಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಪ್ರಥಮ ಶಸ್ತ್ರಚಿಕಿತ್ಸೆಯು ನಡೆಸಿದ್ದು ತುರ್ತು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವುದಾಗಿ ಆಸ್ಪತ್ರೆಯಿಂದ ತಿಳಿಸಿರುತ್ತಾರೆ. ಮುಂದಿನ ಚಿಕಿತ್ಸಾ ಖರ್ಚು ಅಂದಾಜು 5 ಲಕ್ಷ ಬರಬಹುದು. ಸದ್ಯ...

ಪೈಕ : ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ

ವಳಲಂಬೆ - ಪೈಕ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಸಚಿವ ಎಸ್. ಅಂಗಾರ ಫೆ. 4 ರಂದು ಗುದ್ದಲಿಪೂಜೆ ನೆರವೇರಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ, ತಾ.ಪಂ. ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಗ್ರಾ.ಪಂ. ಸದಸ್ಯರಾದ ರೇವತಿ ಆಚಳ್ಳಿ, ಸುಮಿತ್ರಾ ಮೂಕಮಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹರಿಹರ ಪಲ್ಲತ್ತಡ್ಕ :- ಲಯನ್ಸ್ ಕ್ಲಬ್ ವತಿಯಿಂದ ಕ್ಯಾನ್ಸರ್ ದಿನಾಚರಣೆ

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕ ದಲ್ಲಿ ಫೆ.04 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.ಪ್ರೋ.ರಂಗಯ್ಯ ಶೆಟ್ಟಿಗಾರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಿರಿಭಾಗ, ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷ ನೇಮಿಚಂದ್ರ ದೋಣಿಪಳ್ಳ, ಶಾಲಾ ಮುಖ್ಯೋಪಾಧ್ಯಾಯಿನಿ...

ನಾಲ್ಕೂರು : ಸಚಿವ ಅಂಗಾರರಿಂದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರು ಫೆ.04 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಅಣೆಕಟ್ಟು ನಿರ್ಮಾಣ, ಮರಕತ - ಉಜಿರಡ್ಕ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಕಲ್ಲಾಜೆ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಚಾರ್ಮತ - ಉತ್ರಂಬೆ ಭಾಗದ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು - ಕುಳ್ಳಂಪಾಡಿ - ಚಾರ್ಮತ...
error: Content is protected !!