Ad Widget

ಬಾಲಣ್ಣ ಗೌಡ ನಾಯರ್ ಹಿತ್ಲು ನಿಧನ

ಜಾಲ್ಸೂರು ಗ್ರಾಮದ ಸೋಣಂಗೇರಿ ನಾಯರ್ ಹಿತ್ಲು ಬಾಲಣ್ಣ ಗೌಡ ಫೆ. 17 ರಂದು ನಿಧನರಾದರು. ಮೃತರು ಪುತ್ರರಾದ ರುಕ್ಮಯ್ಯ ಗೌಡ, ಮೋಹನ್ ಗೌಡ, ಗಿರಿಧರ ಗೌಡ, ಪುತ್ರಿಯರಾದ ಚಿನ್ನಮ್ಮ, ಲೀಲಾವತಿ, ಭವಾನಿ, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಉಜಿರಡ್ಕ : ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ ಸಂಪನ್ನ – ಮಗುವನ್ನು ಹಿಡಿದು ಹರಕೆ ಸ್ವೀಕರಿಸಿದ ಅಜ್ಜನ ನರ್ತನದ ವಿಡಿಯೋ ವೈರಲ್

ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಫೆ.16 ಮತ್ತು 17 ರಂದು ಶ್ರೀ ಕೊರಗಜ್ಜ ದೈವದ ನರ್ತನ ಸೇವೆ ನಡೆಯಿತು.ಫೆ.16 ಬುಧವಾರ ಸಂಜೆ 5:00 ಗಂಟೆಯಿಂದ ಶ್ರೀ ಮಾತಾ ಅಮೃತ ಕುಟುಂಬ ಏನೆಕಲ್ಲು ಇವರಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ನಂತರ ಕಲ್ಲುರ್ಟಿ ದೈವದ ಭಂಡಾರ ತೆಗೆಯುವುದು ಹಾಗೂ ರಾತ್ರಿ ಕಲ್ಲುರ್ಟಿ ದೈವದ ನರ್ತನ...
Ad Widget

ಕಲ್ಮಡ್ಕ : ಅಂಗವಿಕಲರಿಗೆ ಸೌಲಭ್ಯ ವಿತರಣೆ

ಕಲ್ಮಡ್ಕ ಗ್ರಾಮ ಪಂಚಾಯತ್ ನಿಂದ ಅಂಗವಿಕಲ ಯೋಜನೆಯಡಿ ಮಂಚ ಸೌಲಭ್ಯವನ್ನು ಕಲ್ಮಡ್ಕ ಗ್ರಾಮದ ಮುಚ್ಚಿಲ ಯೂನುಸ್ ಬಿನ್ ಇಸುಬು ಮತ್ತು ಜೈನಾಬಿ ಬಿನ್ ಮೂಸೆ ಬ್ಯಾರಿ ಇವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಹಾಜಿರಾ ಗಫೂರ್ ಮತ್ತು ಸದಸ್ಯ ಲೋಕೇಶ್ ಆಕ್ರಿಕಟ್ಟೆ ಹಾಗೂ ಕಾರ್ಯದರ್ಶಿ ಉಪಸ್ಥಿತರಿದ್ದರು.

ರೈತರ ಪಹಣಿ ಪತ್ರಗಳಲ್ಲಿ ಬೆಳೆಗಳ ವಿವರ ದಾಖಲೀಕರಣವಾಗದೇ ರೈತರಿಗೆ ತೊಂದರೆ – ಶೀಘ್ರ ಸರಿಪಡಿಸುವಂತೆ ಕಂದಾಯ ಸಚಿವರಿಗೆ ಎ.ಪಿ.ಎಂ.ಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ

ರೈತರ ಪಹಣಿ ಪತ್ರಗಳಲ್ಲಿ ಬೆಳೆಗಳ ವಿವರ ದಾಖಲೀಕರಣವಾಗದೇ ರೈತರಿಗೆ ತೊಂದರೆ ಆಗಿದ್ದು ಶೀಘ್ರ ಸರಿಪಡಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಎ.ಪಿ.ಎಂ.ಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ ಸಲ್ಲಿಸಿದ್ದಾರೆ.‌ಮಡಪ್ಪಾಡಿ ಗ್ರಾಮದಲ್ಲಿ ಸುಮಾರು 650 ಜನಕ್ಕಿಂತಲೂ ಹೆಚ್ಚು ಪಹಣಿ ಖಾತೆಗಳನ್ನು ಹೊಂದಿ ಸುಮಾರು 1500 ರಷ್ಟು ಪಹಣಿ ಪತ್ರಗಳಿರುತ್ತವೆ. ಇದೀಗ ಬೆಳೆ ಸಮೀಕ್ಷೆ ಆ್ಯಪ್‌ಗಳ ಮುಖಾಂತರ...

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಈಶ್ವರಪ್ಪ ಅಧಿಕಾರದಿಂದ ಕೆಳಗಿಳಿಯಲಿ- ಪಿ.ಸಿ ಜಯರಾಮ್

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಗ್ರಾಮಿಣ ಅಭಿವೃದ್ಧಿ ಸಚಿವ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಫೆ. 21 ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಪಕ್ಷದ...

ಮಡಪ್ಪಾಡಿ : ಎಳುವೆ ಸೇತುವೆ ಕಾಮಗಾರಿಗೆ ಸಚಿವರಿಂದ ಗುದ್ದಲಿಪೂಜೆ

ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಮಡಪ್ಪಾಡಿ ಗ್ರಾಮದ ಎಳುವೆ ಭಾಗದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಎಸ್ ಅಂಗಾರ ಫೆ.17 ರಂದು ಚಾಲನೆ ನೀಡಿದರು. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಕಡ್ಯ ಹೊಳೆಗೆ ಎಳುವೆ ಬಳಿ ಸೇತುವೆ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಬಿಜೆಪಿ ಮಂಡಲ...

ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆಯಲ್ಲಿ ಸ್ಥಾಪನಾ ದಿನಾಚರಣೆ

ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆಯಲ್ಲಿ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ರವರ ಅಧ್ಯಕ್ಷತೆಯಲ್ಲಿ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ ಎಸ್ ಮುಹಮ್ಮದ್ ಮದನಿ ಉಸ್ತಾದ್ ದುಆ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಸುಳ್ಯ ರೇಂಜ್ ಮದ್ರಸಾ ಮೆನೇಜ್ ಮೆಂಟ್ & ಜಂಮ್ಯೂಹತುಲ್ ಮುಅಲ್ಲಿಮೀನ್ ಕೋಶಾಧಿಕಾರಿಯಾದ ಹಸೈನಾರ್ ದರ್ಮತಣ್ಣಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಎಸ್ಎಫ್ ಕಾರ್ಯಕರ್ತ ಉಮ್ಮರ್ ಬಂಟ್ರಬೈಲ್ ರವರಿಂದ...

ಬೇಕಾಗಿದ್ದಾರೆ

ಸುಳ್ಯದ ಖಾಸಗಿ ಸಂಸ್ಥೆಯೊಂದಕ್ಕೆ ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಮೊ : 77601 71607

ವಿದ್ಯಾಬೋಧಿನೀ ಹಿ.ಪ್ರಾ.ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಹೊರಸಂಚಾರ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಸುಮಾರು 45 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ಮಂಗಳೂರಿನ ವಿವಿದೆಡೆ ಹೊರಸಂಚಾರ ಮಾಡಿದರು. ನರಹರಿಪರ್ವತ, ಮಂಗಳೂರು ಹಾಲು ಉತ್ಪಾದಕ ಘಟಕ, ಪಿಲಿಕುಳ ನಿಸರ್ಗಧಾಮ, ಸ್ಕೌಟ್ಸ್ ಭವನ, ಪಿಲಿಕುಳ ವಿಜ್ಞಾನ ಪ್ರಾಯೋಗಿಕ ಕೇಂದ್ರ, ಪಣಂಬೂರು ಬೀಚ್ ಮುಂತಾದೆಡೆ ತೆರಳಿ ಮಾಹಿತಿ ಪಡೆದು ಸಂತಸಪಟ್ಟರು. ಸ್ಕೌಟ್ಸ್ ಶಿಕ್ಷಕ...
error: Content is protected !!