Ad Widget

ದೇವರಗದ್ದೆ:ಮೊಗೇರ್ಕಳ ಮತ್ತು ಕೊರಗಜ್ಜ ದೈವದ ನೇಮೋತ್ಸವ

ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಫೆ.15 ಮತ್ತು ಫೆ.16ರಂದು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಸಂಜೆ ಕುಕ್ಕೆಶ್ರೀ...

ಕವನ :- ಸೋಲು ಕಲಿಸಿದ ಬದುಕಿನ ಪಾಠ

ಬದುಕು ಒಂದು ಜಂಜಾಟ, ವಿಧಿಯ ಜೊತೆಗೆ ಕಾದಾಟ,ಸೋಲು-ಗೆಲುವಿನ ಮಧ್ಯೆ ನಮ್ಮ ಪರದಾಟ…ಬದುಕೇ ಸೆಣಸಾಟ, ಯಾತಕೆ ಕಾದಾಟ…ಮುಗಿಯದ ಈ ಆಟ, ಬದುಕಿನ ಸೆಣಸಾಟ…ಈ ಬದುಕಿನ ಹಾದಿಲಿ ನೋವು-ನಲಿವು ಸಾಮಾನ್ಯ, ಸರಿದೂಗಿಸಿ ಸಾಗುವವನೇ ಅಸಾಮಾನ್ಯ, ಇಲ್ಲಿ ಅಸಾಮಾನ್ಯ…ಬದುಕಿನ ಪ್ರತಿ ಹೆಜ್ಜೆಲೂ ಸೋಲು ಕಲಿಸುವುದು ಪಾಠ, ಸೋತು ಗೆದ್ದವರು ಸೃಷ್ಟಿಸುವರು ಇತಿಹಾಸ…ಈ ನೋವಿನ ಬದುಕಿನಲಿ ಯಾರು ಯಾರಿಗೂ ಅಲ್ಲ, ನಮ್ಮವರೇ...
Ad Widget

ಸುಬ್ರಹ್ಮಣ್ಯ :- ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ನೂತನ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯದ ಸುಬ್ರಹ್ಮಣ್ಯ ಕಾರ್ಯಕ್ಷೇತ್ರದಲ್ಲಿ ಫೆ.18 ರಂದು ಡಿಜಿಟಲ್ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.ಡಿಜಿಟಲ್ ಸೇವಾ ಕೇಂದ್ರವನ್ನು ಬಳ್ಪ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಕಾರ್ಯದರ್ಶಿಯಾದ ಮೋನಪ್ಪ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ನಿಕಟಪೂರ್ವ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವಿಮಲಾ ರಂಗಯ್ಯ...

ಕೊಲ್ಲಮೊಗ್ರು : ಸಚಿವ ಅಂಗಾರರಿಂದ ಮಲ್ಲಾಜೆ ಬೆಂಡೋಡಿ ರಸ್ತೆಯ ಗುದ್ದಲಿ ಪೂಜೆ

ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಕೊಲ್ಲಮೊಗ್ರು ಗ್ರಾಮದ ಮಲ್ಲಾಜೆ ಬೆಂಡೋಡಿ ರಸ್ತೆಯ ಮಲ್ಲಾಜೆ ಎಂಬಲ್ಲಿ ರೂ.10 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟೀಕರಣದ ಮೂಲಕ ಈ ಭಾಗದ ಜನರ ಬಹುವರ್ಷದ ಬೇಡಿಕೆಗೆ ಸ್ಪಂದಿಸಿ ಫೆ.18 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಸುಳ್ಯ...

ಹರಿಹರಪಲ್ಲತ್ತಡ್ಕ : ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಹಿ.ಜಾ.ವೇ ಒತ್ತಾಯ

ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಳದಲ್ಲಿ ಫೆ.20 ರಿಂದ 22 ರವರೆಗೆ ನಡೆಯುವ ಜಾತ್ರೋತ್ಸವ ಮತ್ತು ಇತರ ಸಂದರ್ಭದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶ ನೀಡದಂತೆ ಮತ್ತು ದೇವಳದಲ್ಲಿ ಏಕರೂಪ ವಸ್ತ್ರಸಂಹಿತೆ ಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಸಮಿತಿ ವತಿಯಿಂದ ದೇವಳದ ಅಭಿವೃದ್ಧಿ ಸಮಿತಿ ಸಂಚಾಲಕರಿಗೆ ಮನವಿ ಸಲ್ಲಿಸಲಾಯಿತು. ಈ...

ಹರಿಹರ ಪಲ್ಲತ್ತಡ್ಕ :- ಲ್ಯಾಂಡ್ ಲೈನ್ ಕೇಬಲ್ ಕಳವು

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಲ್ಲಿ ಸುಮಾರು 4 ಕಿಲೋಮೀಟರ್ ಉದ್ದದ ಲ್ಯಾಂಡ್ ಲೈನ್ ಕೇಬಲ್ ಹಾದುಹೋಗಿದ್ದು, ಊರಿನವರು ಮಂಗಳೂರಿನಿಂದ ತಂದು ಗುಂಡಿ ತೆಗೆದು ಕೇಬಲ್ ಅನ್ನು ನೆಲದ ಒಳಗೆ ಅಳವಡಿಸಿದ್ದರು. ಆದರೆ ಒಂದು ಕಡೆ ಕಾಂಕ್ರೀಟ್ ರಸ್ತೆ ಇದ್ದ ಕಾರಣ ಕೇಬಲ್ ಅನ್ನು ಸುಮಾರು 50 ಮೀಟರ್ ಉದ್ದ ನೆಲದ ಹೊರಗೆ ಅಳವಡಿಸಲಾಗಿತ್ತು. ಈ ನೆಲದ...

ಆಲೆಟ್ಟಿ : ಆನೆ ದಾಳಿಗೆ ಕೃಷಿ ಹಾನಿ – ಅಪಾರ ನಷ್ಟ

ಆಲೆಟ್ಟಿ ಗ್ರಾಮದ ಗುತ್ತಿನಡ್ಕ ಸುಬ್ರಾಯ ಭಟ್ ಎಂಬವರ ತೋಟಕ್ಕೆ ಫೆ.17 ರಂದು ರಾತ್ರಿ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಅಪಾರ ಹಾನಿಯಾಗಿದೆ.

ಕಳಂಜ : ಕುಕ್ಕರ್ ಸ್ಪೋಟ – ಎತ್ತರಕ್ಕೆ ಚಿಮ್ಮಿದ ಕುಕ್ಕರ್ ಮುಚ್ಚಳ- ಅಪಾಯದಿಂದ ಪಾರಾದ ಗೃಹಿಣಿ

ಕುಕ್ಕರ್ ಸ್ಪೋಟಗೊಂಡು ಗೃಹಿಣಿಯೊಬ್ಬರು ಅಪಾಯದಿಂದ ಪಾರಾದ ಘಟನೆ ಫೆ. 17ರಂದು ಕಳಂಜ ಗ್ರಾಮದಲ್ಲಿ ನಡೆದಿದೆ. ಕಳಂಜ ಗ್ರಾಮದ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡಿರುವುದಾಗಿದೆ. ಶ್ರೀಮತಿ ಸುಮಾ ವಿ. ಆಚಾರ್ಯರು ಅಪಾಯದಿಂದ ಪಾರಾದ ಗೃಹಿಣಿ. ಬೆಳಗ್ಗಿನ ಉಪಹಾರಕ್ಕೆ ಕುಕ್ಕರ್ ನಲ್ಲಿ ಪಲಾವ್ ಇಟ್ಟಿದ್ದರು. ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ...
error: Content is protected !!