Ad Widget

ಕಾಂಚೋಡು ಜಾತ್ರೋತ್ಸವ- ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮೋತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವ 'ಕಾಂಚೋಡು ಜಾತ್ರೋತ್ಸವ' ನಡೆಯುತ್ತಿದ್ದು, ಫೆ.13ರಂದು ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮೋತ್ಸವ ನಡೆಯಿತು. ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಪೂಜೆ, ಪ್ರಸಾದ ಭೋಜನದ ನಂತರ ರಾತ್ರಿ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ,...

ವಿವಾಹ ನಿಶ್ಚಿತಾರ್ಥ: ಜೀವನ್.ಕೆ-ಉಷಾ.ಕೆ.ಎಸ್

ಸುಳ್ಯ ತಾಲೂಕು ಕಳಂಜ ಗ್ರಾಮದ ಕಜೆಮೂಲೆ ಚನಿಯಪ್ಪ ನಾಯ್ಕರ ಪುತ್ರ ಜೀವನ್.ಕೆ ರವರ ವಿವಾಹ ನಿಶ್ಚಿತಾರ್ಥವು ಐವತ್ತೊಕ್ಲು ಗ್ರಾಮದ ಕೆಮ್ಮೂರು ಸುಬ್ರಾಯ ನಾಯ್ಕರ ಪುತ್ರಿ ಉಷಾ.ಕೆ.ಎಸ್ ರವರೊಂದಿಗೆ ಫೆ.13ರಂದು ಕೆಮ್ಮೂರು ವಧುವಿನ ಮನೆಯಲ್ಲಿ ನಡೆಯಿತು.
Ad Widget

ಹರಿಹರ ಪಲ್ಲತ್ತಡ್ಕ : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನೂತನ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಡಿಜಿಟಲ್ ಸೇವಾ ಕೇಂದ್ರವು ಹರಿಹರ ಪಲ್ಲತ್ತಡ್ಕದ ಸೇವಾ ಕೇಂದ್ರದಲ್ಲಿ ಫೆ.13 ರಂದು ಉದ್ಘಾಟನೆಗೊಂಡಿತು. ಡಾ.ಚಂದ್ರಶೇಖರ ಕಿರಿಭಾಗ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಪಲ್ಲತ್ತಡ್ಕ ಒಕ್ಕೂಟದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ದೀಪ ಬೆಳಗಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...

ಫೆ.12-ಫೆ.16:ಅಜಪಿಲ ಜಾತ್ರೋತ್ಸವ- ದೇವಸ್ಥಾನದಲ್ಲಿ ಶಿವೇಲಿ, ಕಲಶಾಭಿಷೇಕ ಕಾರ್ಯಕ್ರಮ

ಫೆ.16ರಂದು ಹಗಲು ದರ್ಶನ ಬಲಿ, ಬಟ್ಟಲು ಕಾಣಿಕೆ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಫೆ.13(ಇಂದು) ಆದಿತ್ಯವಾರದಂದು ಬೆಳಗ್ಗೆ ಗಣಪತಿ ಹವನ, ಉಷಾಃಪೂಜೆ ನಡೆದು ಶಿವೇಲಿ, ನವಕ ಕಲಶಾಭಿಷೇಕ,...

ಕಾಂಚೋಡು ಜಾತ್ರೋತ್ಸವ- ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ

ಇಂದು ರಾತ್ರಿಯಿಂದ ನೇಮೋತ್ಸವ ಆರಂಭ ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11 ಶುಕ್ರವಾರದಂದು ಆರಂಭಗೊಂಡಿದ್ದು ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಇಂದು ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಹವನ, ಬೆಳಗಿನ ಪೂಜೆ ನಡೆದು ಬಳಿಕ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ...

ಕಾಂಚೋಡು ಜಾತ್ರೋತ್ಸವದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ

ಕಾಂಚೋಡು ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು(ಫೆ.13) ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮದ ನಂತರ ದೇವಸ್ಥಾನದ ವತಿಯಿಂದ ಭಜನಾ ಕಾರ್ಯಕ್ರಮದಲ್ಲಿ ಭಾಗಿಗಳಾದ ವಿದ್ಯಾರ್ಥಿಗಳಿಗೆ ಹಾಗೂ ಭಜನಾ ತಂಡದ ಮುಖ್ಯಸ್ಥರಿಗೆ ಪ್ರಸಾದ ಹಾಗೂ ಸ್ಮರಣಿಕೆ ನೀಡಲಾಯಿತು.
error: Content is protected !!