Ad Widget

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ- ಪಕ್ಷೇತರ ಅಭ್ಯರ್ಥಿ ಸೇರಿ 8 ಮಂದಿ ನಾಮಪತ್ರ ಸಲ್ಲಿಕೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಮಾ.7ರಂದು ನಡೆಯಲಿದ್ದು ಇಂದು 8 ಮಂದಿ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಚುನಾವಣಾ ದಿನಾಂಕ ಘೋಷಣೆಯಾದ ಸಂದರ್ಭದಲ್ಲಿ 13 ಮಂದಿ ‌ನಾಮಪತ್ರ ಸಲ್ಲಿಸಿದ್ದರು. ನಂತರ ಕೊರೊನಾ ಕಾರಣದಿಂದ ಚುನಾವಣೆಯು ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಫೆ.26 ಮತ್ತು ಫೆ.27 ರಂದು ನಾಮಪತ್ರ ಸಲ್ಲಿಸಲು...

ಓಡಬಾಯಿ : ಜನಪ್ರಿಯ ಬೇಕರಿ ಶುಭಾರಂಭ

ಸುಳ್ಯದ ಓಡಬಾಯಿ ಯಲ್ಲಿರುವ ಕಸ್ತೂರಿ ಕಾಂಪ್ಲೆಕ್ಸ್ ನಲ್ಲಿ ಜನಪ್ರಿಯ ಬೇಕರಿ ಮತ್ತು ಹೋಟೆಲ್ ಫೆ.26 ರಂದು ಶುಭಾರಂಭಗೊಂಡಿತು. ಕಾಂಪ್ಲೆಕ್ಸ್ ಮಾಲಕರಾದ ಶ್ರೀಮತಿ ಶಶಿಕಲಾ ಶುಭಕರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.
Ad Widget

ಸುಳ್ಯ : ಸಚಿವ ಅಂಗಾರರಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಸ್ತ್ರತ ಕಟ್ಟಡಗಳ ಉದ್ಘಾಟನೆ

ಬದುಕಿಗೆ ಶಿಕ್ಷಣ ಒಂದು ಆಧಾರ, ಹಾಗಾಗಿ ಜ್ಞಾನ ಪಡೆಯುವಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ಬಹಳ ಮುಖ್ಯವಾದ ಸಂಗಾತಿಯಾಗಿದೆ. ಆದರೆ ಇತ್ತೀಚೆಗೆ ಸ್ಪಷ್ಟ ಶಿಕ್ಷಣ ನೀತಿ ಇಲ್ಲದೆ ಇರುವುದರಿಂದ ಅನೇಕ ಗೊಂದಲಗಳನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ಕಾಣುವ ನಿಟ್ಟಿನಲ್ಲಿ ಅನುದಾನ ಮಂಜೂರು ಮಾಡುತ್ತಿದ್ದು ಅದರಲ್ಲಿ ಶಿಕ್ಷಣ ವ್ಯವಸ್ಥೆಯು ಸೇರಿದೆ ಎಂದು...

ಗುತ್ತಿಗಾರು : ಬೃಹತ್ ರಕ್ತದಾನ ಶಿಬಿರ – ರಕ್ತದಾನಿಗಳ ತಂಡ ರಚನೆ

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಫೆ.25 ರಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ...

ಆಲೆಟ್ಟಿ : ರೋಟರಿ ಕ್ಲಬ್ ವತಿಯಿಂದ ಅಂಗನವಾಡಿಗೆ ಜಾರುಬಂಡಿ ಕೊಡುಗೆ

ರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿ ಕೊಡುಗೆರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿಯನ್ನು ಕೊಡುಗೆಯಾಗಿ ನೀಡಿದರು. ಇದರ ಉದ್ಘಾಟನೆಯನ್ನು ರೋಟರಿ ಜಿಲ್ಲಾ ಗವರ್ನರ್ ಅರ್. ಆರ್. ರವೀಂದ್ರ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ‌ ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ...

ಮಾ.01: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.01ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದ್ದು ಈ ಪ್ರಯುಕ್ತ ದೇವಳದಲ್ಲಿ ಸಂಜೆ ಗಂಟೆ 5.00ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ ನಡೆಯಲಿರುವುದು. ನಂತರ ರಾತ್ರಿ ಗಂಟೆ 10.00ರಿಂದ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಸಾರಥ್ಯದ ಕುಸಲ್ದರಸೆ ನವೀನ್.ಡಿ ಪಡೀಲ್ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ...

ಮಾ.04-ಮಾ.05: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ 20ನೇ ವರ್ಷದ ಏಕಾಹ ಭಜನೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.04 ಶುಕ್ರವಾರ ಸೂರ್ಯೋದಯದಿಂದ ಮಾ.05 ಶನಿವಾರ ಸೂರ್ಯೋದಯದವರೆಗೆ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ 20ನೇ ವರ್ಷದ ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ...

ಮಾ.01: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರುದ್ರ ಪಾರಾಯಣ, ಹಾಲು-ಸೀಯಾಳ ಅಭಿಷೇಕ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.01ರಂದು ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ಗಂಟೆ 7.00ರಿಂದ ರುದ್ರ ಪಾರಾಯಣ, ಹಾಲು-ಸೀಯಾಳ ಅಭಿಷೇಕ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ ವಿನಂತಿಸಿದ್ದಾರೆ.
error: Content is protected !!