ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕಾಮತ್ ಬಿಲ್ಡಿಂಗ್ ನಲ್ಲಿ ರೋಹಿತ್ ಅಬೀರ ಮಾಲಕತ್ವದಲ್ಲಿ ಸಂಭ್ರಮ ಇಲೆಕ್ಟ್ರಾನಿಕ್ಸ್ ಮೇ.16ರಂದು ಶುಭಾರಂಭಗೊಂಡಿತು.
ಉದ್ಘಾಟನೆಯನ್ನು ನೂತನ ಸಂಸ್ಥೆಯನ್ನು ಸುಳ್ಯದ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ನೆರವೇರಿಸಿ ಶುಭ ಹಾರೈಸಿದರು. ಕಾಮತ್ ಬಿಲ್ಡಿಂಗ್ ನ ಮಾಲಕರಾದ ಕೆ.ಬಿ.ಕಾಮತ್ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಧನಂಜಯ ಅಬೀರ, ಶ್ರೀಮತಿ ರಾಜೇಶ್ವರಿ ಅಬೀರ, ಶ್ರೀಮತಿ ಮಮತಾ ಅಬೀರ, ಬೇಬಿ ಸೋನಾಲಿ ಮತ್ತು ಬೇಬಿ ಕಶ್ಮಿಯಾ, ರಾಮಚಂದ್ರ ಕನ್ಯಾನ, ಚಂದ್ರಕುಮಾರ್ ಕುಯಿಂತೋಡು, ರೋಹಿತ್ ಕುಡೆಕಲ್ಲು, ಚರಣ್ ರಾಜ್, ಚೈತ್ರ ಪ್ರಸಾದ್, ನಿಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು. ಮಾಲಕ ರೋಹಿತ್ ಅಬೀರ ಅತಿಥಿಗಳನ್ನು ಬರಮಾಡಿಕೊಂಡರು. ಇಲ್ಲಿ ಎಲ್ಲಾ ಪ್ರಸಿದ್ಧ ಕಂಪೆನಿಯ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ದೊರೆಯುತ್ತದೆ.