Ad Widget

ತಾಲೂಕಿನ ವಿವಿಧೆಡೆ ಸುರಿದ ಅಕಾಲಿಕ ಮಳೆ

ಸುಳ್ಯ ತಾಲೂಕಿನ ವಿವಿಧೆಡೆ ಫೆ.16ರಂದು ರಾತ್ರಿ ಅಕಾಲಿಕ ಮಳೆ ಸುರಿದಿದೆ. ಸುಬ್ರಹ್ಮಣ್ಯ ಪರಿಸರದಲ್ಲಿ ಎರಡನೇ ಬಾರಿಗೆ ಮಳೆ ಸುರಿದರೇ ಗುತ್ತಿಗಾರು, ಮಡಪ್ಪಾಡಿ, ಪಂಜ, ಬಳ್ಪ , ಎಲಿಮಲೆ, ಕುಕ್ಕುಜಡ್ಕ ಮರ್ಕಂಜ ಮೊದಲಾದ ಕಡೆಗಳಲ್ಲಿ ಮೊದಲ ಬಾರಿ ಮಳೆ ಸುರಿದಿದೆ. ನಿರೀಕ್ಷೆಯಿಲ್ಲದೇ ಸುರಿದ ಮಳೆಯಿಂದಾಗಿ ಸಭೆ, ಸಮಾರಂಭಗಳಲ್ಲಿ ತೊಂದರೆ ಅನುಭವಿಸುವಂತಾಯಿತು.

ಗಡಿಕಲ್ಲು :- ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು.ಫೆ.15 ಮಂಗಳವಾರದಂದು ಪ್ರಾತಃಕಾಲ 6:00 ಗಂಟೆಗೆ ಆಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30 ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00 ಗಂಟೆಗೆ ಉಗ್ರಾಣ ಮಹೂರ್ತ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6:00...
Ad Widget

ನಾಳೆ (ಫೆ.17) ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಕಡಿತ

110 ಕೆ.ವಿ ಪುತ್ತೂರು, ಮಾಡಾವು ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಫೆ.17ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 110/33/11 ಕೆ.ವಿ ಪುತ್ತೂರು, ಮಾಡಾವು ಮತ್ತು ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊಡುವ ಎಲ್ಲಾ 33ಕೆವಿ ಕಡಬ ಸುಬ್ರಹ್ಮಣ್ಯ, ಸವಣೂರು ನೆಲ್ಯಾಡಿ, ಮಾಡಾವು ಕುಂಬ, ಕಾವು ಸುಳ್ಯ, ಬೆಳ್ಳಾರೆ ಗುತ್ತಿಗಾರು ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು....

ಗಾಂಧಿನಗರ : ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಕೆಡ್ಡಸ ಆಚರಣೆ

ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಕೆಡ್ಡಸ ಆಚರಣೆ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಇಂದಿರಾ ರಾಜಶೇಖರ ರೈ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್, ಖಜಾಂಜಿ, ಶ್ರೀಮತಿ ಗಿರಿಜಾ ಎಂ ವಿ, ಸದಸ್ಯೆ ಶ್ರೀಮತಿ ಸುಜಾತ ಎನ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸವಿತ,...

ಬೆಳ್ಳಾರೆ: ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶ್ರೀ ದೇವರ ದರ್ಶನ ಬಲಿ, ರಾತ್ರಿ ಅಗ್ನಿಗುಳಿಗ ದೈವದ ನೇಮೋತ್ಸವ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗುತ್ತಿದ್ದು, ಇಂದು(ಫೆ.16) ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ದೇವಸ್ಥಾನದಲ್ಲಿ ಪೂರ್ವಾಹ್ನ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟು ಬಲಿ ನಡೆದು ಶ್ರೀ ದೇವರ ಅವಭೃಥ ಸ್ನಾನ ನಡೆಯಿತು. ಬಳಿಕ ದರ್ಶನ...

ಕಲ್ಮಡ್ಕ : ಪಡ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡು ಉದ್ಘಾಟನೆ

ಕಲ್ಮಡ್ಕ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡಿನ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 14 ರಂದು ನಡೆಯಿತು.ಬಸ್ ನಿಲ್ದಾಣದ ಪುಸ್ತಕ ಗೂಡಿನ ಉದ್ಘಾಟನೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್ ರವರು...

ಕಲ್ಮಡ್ಕ : ಮುಚ್ಚಿಲ ಬಳಿ ಕಾಂಕ್ರೀಟೀಕರಣಗೊಂಡ ರಸ್ತೆ ಉದ್ಘಾಟನೆ

ಕಲ್ಮಡ್ಕ ಗ್ರಾಮದ ಮುಚ್ಚಿಲ ಮರಕ್ಕಡ ಕಾಚಿಲ ರಸ್ತೆಯ ಮುಚ್ಚಿಲ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಮುಚ್ಚಿಲ ಮಸೀದಿಯ ಧರ್ಮಗುರು ಝೈನುಲ್ ಅಭಿದೀನ್ ತಂಗಳ್ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಪೂರ್, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕೆ ಎಸ್, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ ಬೊಳಿಯೂರು, ಪಂಚಾಯತ್ ಅಭಿವೃದ್ಧಿ...

ಹಿಜಾಬ್ ವಿವಾದದ ಹಿಂದೆ ದೇಶ ವಿಭಜನೆಯ ಸಂಚಿರುವ ಆರೋಪ : ಎನ್.ಐ.ಎ. ತನಿಖೆಗೆ ವಿ.ಹೆಚ್.ಪಿ ಒತ್ತಾಯ

ಹಿಜಾಬ್ ಪ್ರಕರಣವನ್ನು ಎನ್ ಐ ಎ ನಿಂದ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ಹಿಜಾಟ್ ಎಂಬುದು ಪ್ರಕರಣ ಮಾತ್ರವಲ್ಲ ಇದೊಂದು ಜಿಹಾದಿನ ಷಡ್ಯಂತ್ರ ಮುಸಲ್ಮಾನ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾ ವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಕರಣದ ಹಿಂದೆ PFI SDPI ಮೂಲಭೂತವಾದಿ ಮುಸ್ಲಿಂ...

ಸುಳ್ಯಕ್ಕೆ ಕಾಲಿರಿಸಿದ ಹಿಜಾಬ್ ಗಲಾಟೆ – ಪ್ರವೇಶ ನಿರಾಕರಿಸಿದ ಶಾಲಾ ಆಡಳಿತ – ಪೊಲೀಸರ ಆಗಮನ

ಹಿಜಾಬ್ ಗಲಾಟೆ ಸುಳ್ಯಕ್ಕೂ ಕಾಲಿರಿಸಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಹಿಜಾಬ್ ಧರಿಸಿ ಬಂದ ಘಟನೆ ಇಂದು ನಡೆದಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಆವರಣದಲ್ಲಿ ವಿದ್ಯಾರ್ಥಿಗಳು ಸೇರಿದ್ದಾರೆ.‌ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು ಬಂದೋಬಸ್ತ್ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಫೆ.17ರಂದು ಸುಬ್ರಹ್ಮಣ್ಯದಲ್ಲಿ ವೆಂಕಟರಮಣ ಸೊಸೈಟಿಯ 16ನೇ ಶಾಖೆ ಉದ್ಘಾಟನೆ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಬ್ರಹ್ಮಣ್ಯ ಶಾಖೆಯ ಉದ್ಘಾಟನೆಯು ಫೆ. 17 ರಂದು ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ. ಸಿ. ಜಯರಾಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಶ್ರೀಕೃಪಾ ಕಾಂಪ್ಲೆಕ್ಸ್ ನಲ್ಲಿ ಸಂಘದ 16ನೇ ಶಾಖೆಯು ಕಾರ್ಯಾರಂಭ ಮಾಡಲಿದೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ಪ್ರವರ್ತಿಸಲ್ಪಟ್ಟಿರುವ ಸಂಘವು 1997ರಲ್ಲಿ...
Loading posts...

All posts loaded

No more posts

error: Content is protected !!