ಗಾಂಧಿನಗರ ಸುಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ ಗಾಂಧಿನಗರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ.,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ,ಶಾಲಾ ಸಮಿತಿಯ ಹಿರಿಯ ಸಲಹೆಗಾರರು ಎಂ ವೆಂಕಪ್ಪ ಗೌಡ, ಎನ್ ಎ ರಾಮಚಂದ್ರ. ನಪಂ ಸದಸ್ಯೆ ಪ್ರವೀತ, ಶಾಲಾ ಸಮಿತಿ ನಿರ್ದೇಶಕ ಆರ್ ಕೆ ಮೊಹಮ್ಮದ್. ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. . ಸಭೆಯಲ್ಲಿ ಮುಂದಿನ ರೂಪು ರೇಷೆ ಗಳ ಬಗ್ಗೆ ಚರ್ಚಿಸಲಾಯಿತು. ಪ್ರಾಂಶುಪಾಲ ಆನಂದ್ ಸ್ವಾಗತಿಸಿ ವರದಿ ವಾಚಿಸಿದರು.
- Friday
- November 1st, 2024