- Wednesday
- September 9th, 2026
ಆಯುರ್ವೇದ ವೈದ್ಯಕೀಯ ಸ್ನಾತಕೋತರ ಪದವಿ ಪರೀಕ್ಷೆಯಲ್ಲಿ ಯೋಗ ಮತ್ತು ಸ್ವಸ್ತ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದ ಡಾ. ಹಿತಾ ಮಡ್ತಿಲ ಇವರಿಗೆ ಐವರ್ನಾಡು ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಶ್ರೀಮತಿ ರೇವತಿ ಬೋಳುಗುಡ್ಡೆ ಮತ್ತು ಶ್ರೀಮತಿ ಭಾರತಿ ಗುತ್ತಿಗಾರು ಮೂಲೆ ನೆರವೇರಿಸಿದರು. ಈ ಸಂದರ್ಭದಲ್ಲಿ...
ಸುಳ್ಯದ ಹಳೆಗೇಟು ಮಿಲಿಟರಿ ಗ್ರೌಂಡ್ ಹತ್ತಿರ 25 ಅಡಿ ಆಳದ ಬಾವಿಗೆ ಬಿದ್ದ ಆಡನ್ನು ಸುಳ್ಯ ಅಗ್ನಿಶಾಮಕ ಠಾಣೆಯ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಎಸ್, ಸಿಬ್ಬಂದಿಗಳಾದ ಆನಂದ, ಚಂದ್ರಶೇಖರ, ರಾಜೇಶ ಕೆ, ರಾಜೇಶ್ ಎಸ್.ಕೆ., ಮೋಹನ್ ಬಾಬು ಹಾಗೂ ಹರ್ಷವರ್ಧನ ರವರು ಭಾಗವಹಿಸಿದ್ದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಜೂ.11ರಂದು ಗೌಪ್ಯ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಮಾಯಿಲಪ್ಪ.ಜಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ರಾಜನಾಯಕ.ಟಿ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು. ಶಿಕ್ಷಕರುಗಳಾದ ಶಾಂತಕುಮಾರಿ, ಪಾರ್ವತಿ.ಕೆ, ಸೌಮ್ಯ.ಎಂ, ಅನ್ನಪೂರ್ಣ ಬಿ.ಸಿ, ಶ್ರುತಿ.ಕೆ, ಯಶ್ವಿತಾ ಮತ್ತು ವಿನಯ್ ಇವರುಗಳು ಚುನಾವಣಾ...
ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳು ಹಾಗೂ ಡಯಾಲಿಸಿಸ್ ರೋಗಿಗಳಿಗೆ ವಿತರಿಸಲಾಗುತ್ತಿರುವ ಆಹಾರದಲ್ಲಿ ತಾರತಮ್ಯ, ಆಹಾರ ದುರುಪಯೋಗ ಹಾಗೂ ಕರ್ತವ್ಯ ಲೋಪ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಆಹಾರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರು ದೂರು ಸಲ್ಲಿಸಿದ್ದಾರೆ.ದೂರಿನಲ್ಲಿ, ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ನೀಡಲಾಗುವ ಆಹಾರದ ಸೌಲಭ್ಯವನ್ನು ಸಿಬ್ಬಂದಿಗಳಿಗೂ...
ಶ್ರೀರಾಮ ಯುವಕ ಸಂಘ ದಬ್ಬಡ್ಕ-ಕಾಂತಬೈಲು, ಗ್ರಾಮ ಪಂಚಾಯತ್ ಚೆಂಬು, ಸಹಕಾರಿ ಸಂಘ, ಅರಣ್ಯ ಸಮಿತಿ ಚೆಂಬು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಸ್ಥಳೀಯರ ಸಹಕಾರದೊಂದಿಗೆ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರದ ಕೊಂಬೆಗಳ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳ ಸ್ವಚ್ಛತಾ ಶ್ರಮದಾನ ಕಾರ್ಯವು ಜು.12 ರಂದು ನಡೆಯಿತು.
ನಾಲ್ಕೂರು ಗ್ರಾಮದ ನಡುಗಲ್ಲು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಜು.14 ರಂದು ನಡೆದ ಸಭೆಯಲ್ಲಿ ವೆಂಕಟ್ ವಳಲಂಬೆ ಹಾಗೂ ಕಿರಣ್ ಬುಡ್ಲೆಗುತ್ತು ಅವರನ್ನು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರುಗಳನ್ನಾಗಿ ನೇಮಕ ಮಾಡಲಾಯಿತು.ಈ ಸಂದರ್ಭದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯ ದೈವಜ್ಞರು,...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 14 ಜುಲೈ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 14) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಬೆಳ್ಳಾರೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಾತೃ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ 28 ರಂದು ಸಂಜೆ 4 ಘಂಟೆಗೆ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಜು. 13 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಾತೃಮಂಡಳಿ ಅಧ್ಯಕ್ಷೆ ಪೂರ್ಣಿಮಾ ಪಡ್ಪುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಶಶಿಕಲಾ ಪದ್ಮನಾಭ ಚೂಂತಾರು, ಆಡಳಿತ ಮಂಡಳಿ ಅಧ್ಯಕ್ಷ...
ಸೂಂತೋಡು ಡೆಂಟಲ್ ಕೇರ್ ಹಾಗೂ ಐವಿಎಫ್ ಆಕ್ಸೆಸ್ ವತಿಯಿಂದ ಜು. 18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುಳ್ಯದಲ್ಲಿ ಉಚಿತ ಬಂಜೆತನ ಸಮಾಲೋಚನೆ ಹಾಗೂ ಫಲವತ್ತತೆ ಪರಿಶೀಲನೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಬಿರವು ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆಯಿರುವ ಸೂಂತೋಡು ಎಂಪೋರಿಯಂನ ಮೊದಲ ಮಹಡಿಯಲ್ಲಿರುವ ಸೂಂತೋಡು ಡೆಂಟಲ್ ಕೇರ್‌ನಲ್ಲಿ ಬಂಜೆತನ...
ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಗುತ್ತಿಗಾರು ಗ್ರಾಮದ ಬಾಕಿಲ-ಪೈಕ ರಸ್ತೆಯ ಕಾಂಕ್ರೀಟೀಕರಣದ ಉದ್ಘಾಟನೆಯನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಪ್ರಮುಖರಾದ ವೆಂಕಟ್ ದಂಬೆಕೋಡಿ, ವರ್ತಕರ ಸಂಘದ ಅಧ್ಯಕ್ಷ ವಿನ್ಯಾಸ್ ಕೊಚ್ಚಿ, ಕಿಶೋರ್ ಕುಮಾರ್ ಪೈಕ, ರಾಕೇಶ್ ಮೆಟ್ಟಿನಡ್ಕ, ಜಗದೀಶ್ ಪೈಕ, ಅಚ್ಯುತ ಗುತ್ತಿಗಾರು,...
Loading posts...
All posts loaded
No more posts
