ಕುಕ್ಕೆ ಸುಬ್ರಹ್ಮಣ್ಯ : ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ವಾರದ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಅಕ್ಟೋಬರ್ 25 : ಕುಕ್ಕೆ ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರ ಕುಮಾರಧಾರ ಸ್ಥಾನಗಟ್ಟ, ಕುಲ್ಕುಂದ ರಸ್ತೆಯ ಬದಿ ಹಾಗೂ ಪರಿಸರದಲ್ಲಿ 549ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

. . . . . . . . .

ಸುಮಾರು 40ಕ್ಕೂ ಮಿಕ್ಕಿ ಸ್ವಯಂಸೇವಕರು ವಿವಿಧ ಕಡೆಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಬಾಟಲ್ ಬ್ಯಾಗ್ ಹಾಗೂ ಇನ್ನಿತರ ಕೊಚ್ಚೆ ವಸ್ತುಗಳನ್ನು ಚೀಲದಲ್ಲಿ ತುಂಬಿಸಿ ಕಸ ವಿಲೇವಾರಿ ಸಂಗ್ರಹಿಸಿದರು.

. . . . . . .

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಕಕ್ಕೆಪದವು ಅವರು “ನಾವು ನಮ್ಮ ಸಮಾಜ ಸೇವಾ ಟ್ರಸ್ಟ್ ಮುಖಾಂತರ ನಿರಂತರವಾಗಿ ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರದ ಸ್ವಚ್ಛತೆಯನ್ನ ಹಾಗೂ ಸ್ವಚ್ಛ ಪರಿಸರವನ್ನು ಕಾಪಾಡುವುದಕ್ಕೋಸ್ಕರ ಪ್ರತಿ ರವಿವಾರ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಾವು ಪ್ರತಿ ವಾರ ಎಷ್ಟೇ ಸ್ವಚ್ಛತೆಯನ್ನು ಮಾಡಿದರು ಮತ್ತೆ ಮತ್ತೆ ಭಕ್ತಾದಿಗಳು ಎಲ್ಲೆಂದರಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ಚೀಲ, ಬಾಟಲ್, ತಟ್ಟೆಗಳನ್ನ ಎಸೆಯುತ್ತಿದ್ದಾರೆ. ದಯಮಾಡಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರತೆಯನ್ನ ಕಾಪಾಡೋಣ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ. ಅಲ್ಲದೆ ಸಾವಿರಾರು ಭಕ್ತಾದಿಗಳು ಬರುವಂತ ಈ ಪುಣ್ಯಕ್ಷೇತ್ರದ ಸ್ವಚ್ಛತೆಯನ್ನ ಕಾಪಾಡುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವೂ ಹೌದು. ಆ ನಿಟ್ಟಿನಲ್ಲಿ ಇನ್ನು ಮುಂದಕ್ಕಾದರೂ ಪರಿಸರವನ್ನು ಸ್ವಚ್ಛಗೊಳಿಸೋಣ ಎಂದು ಭಕ್ತಾದಿಗಳಿಗೆ ಈ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದೇವೆ, ದಯಮಾಡಿ ಸಹಕರಿಸಬೇಕು” ಎಂದು ವಿನಂತಿಸಿಕೊಂಡರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading