ಕುಲ್ಕುಂದ ಶ್ರೀ ಬಸವೇಶ್ವರ ಭಜನಾ ತಂಡಕ್ಕೆ ಸಮವಸ್ತ್ರ ವಿತರಣೆ

ಸುಬ್ರಹ್ಮಣ್ಯ ಅಕ್ಟೋಬರ್ 25 : ಕುಲ್ಕುoದ ಶ್ರೀ ಬಸವೇಶ್ವರ ಭಜನಾ ತಂಡದ ಎಲ್ಲಾ ಭಜನಾರ್ತಿಗಳಿಗೆ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಬಳಿಯ ದೋಣಿಮಕ್ಕಿಯ ಕುಕ್ಕೆ ಶ್ರೀ ನಿವಾಸದಲ್ಲಿ ಸಮವಸ್ತ್ರಗಳನ್ನು ಶನಿವಾರ ವಿತರಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಕಕ್ಕೆಪದವು ಅವರು “ಭಜನೆಯು ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ, ಮಾತ್ರವಲ್ಲದೆ ಮನಸ್ಸನ್ನು ಏಕಾಗ್ರತೆಯಿಂದ ಇರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿ ಮನೆಗಳಲ್ಲಿ ನಿತ್ಯ ಭಜನೆ ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸದಾ ಇರುತ್ತದೆ. ಹಾಗೆಯೇ ಭಜನೆಯಿಂದ ಆರೋಗ್ಯದ ಮೇಲೆ ಕೂಡ ಒಳ್ಳೆಯ ಪರಿಣಾಮ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ಭಜನೆಯಲ್ಲಿ ಪಾಲ್ಗೊಂಡು ಸಹಕರಿಸುವುದರೊಂದಿಗೆ ತಾವು ತಮ್ಮ ಮನೆಗಳಲ್ಲಿ ಭಜನೆಯನ್ನು ನಿತ್ಯ ಪಠಿಸಬೇಕಾಗಿ ಕೇಳಿಕೊಳ್ಳುತ್ತೇನೆ”ಎಂದರು.

. . . . . . .

ಇದೇ ಸಂದರ್ಭದಲ್ಲಿ ಕುಲ್ಕುಂದ ಬಸವೇಶ್ವರ ಭಜನಾ ಮಂಡಳಿಯ ಚಂದ್ರಶೇಖರ(ಕಿಟ್ಟ) ಹಾಗೂ ಗಿರೀಶ ಆಚಾರ್ಯ ಅವರುಗಳನ್ನು ರವಿ ಕಕ್ಕೆಪದವು ಹಾಗೂ ಶ್ರೀಮತಿ ಗೀತಾ ರವಿ ಕಕ್ಕೆಪದವು ಅವರು ಸನ್ಮಾನಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading