ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತರು

ಓಕೆ

. . . . . . . . .

. . . . . . .

ಸುಬ್ರಹ್ಮಣ್ಯ ಅಕ್ಟೋಬರ್ 25 : ದಸರಾ ರಜೆ ಕಳೆದು ಶಾಲಾ ಕಾಲೇಜುಗಳು ಆರಂಭವಾದರೂ ಮತ್ತೆ ಕಚೇರಿಗಳಿಗೆ ಶನಿವಾರ, ಆದಿತ್ಯವಾರ ಹಾಗೂ ಸೋಮವಾರ ವಾಲ್ಮೀಕಿ ಜಯಂತಿ ರಜೆ ಇರುವುದರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದರು.

ಶನಿವಾರ ಸಂಜೆಯಿಂದಲೇ ತಂಡೋಪ ತಂಡವಾಗಿ ಆಗಮಿಸಿದ ಭಕ್ತರು ಶ್ರೀ ದೇವಳದ ವಸತಿ ಗ್ರಹಗಳು ಹಾಗೂ ಖಾಸಗಿ ವಸತಿ ಗ್ರಹಗಳಲ್ಲಿ ತಂಗಿ ಮರುದಿನ ಬೆಳಗ್ಗೆಯಿಂದಲೇ ಪವಿತ್ರ ಪುಣ್ಯ ನದಿ ಕುಮಾರದಾರದಲ್ಲಿ ತೀರ್ಥ ಸ್ನಾನ ಮಾಡಿ ಅಲ್ಲಿಂದ ಮುಖ್ಯರಸ್ತೆಯಾಗಿ ಶ್ರೀ ದೇವಳದ ಗೋಪುರ ದಾಟಿ ಹೊರಾಂಗಣ ಪ್ರವೇಶಿಸಿದರು.

ಬೆಳಿಗ್ಗೆಯಿಂದಲೇ ಭಕ್ತಾದಿಗಳ ಸರತಿ ಸಾಲು ನಿಧಾನವಾಗಿ ಸಾಗುತ್ತಾ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ತದನಂತರ ಮಧ್ಯಾಹ್ನ 11 ಗಂಟೆಗೆ ತುಲಾಭಾರ ಹಾಗೂ ಅಭಿಷೇಕ ನಡೆದು 12 ಗಂಟೆಗೆ ಮಹಾಪೂಜೆ ನಡೆಯುವ ಸಮಯದಲ್ಲಿ ಭಕ್ತರ ಪ್ರವೇಶವನ್ನು ಮೇಲ್ಗಡೆಗೊಳಿಸಲಾಗಿತ್ತು. ಆ ಹೊತ್ತಿಗೆ ಆಗಲಿ ಮತ್ತಷ್ಟು ಭಕ್ತರು ಜಮಾಯಿಸತೊಡಗಿದರು.

ಮಹಾಪೂಜೆ ಕಳೆದ ತಕ್ಷಣ ಇಡೀ ಹೊರಾಂಗಣದ ಸುತ್ತಮುತ್ತಲ ಭಕ್ತರ ದಂಡೆ ದಂಡು ಕಾಣಿಸಿತ್ತು. ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳು ಮಾತ್ರವಲ್ಲದೆ ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನು ಕಾರ್ಯನಿರ್ವಹಣಾಧಿಕಾರಿಯವರು ಭಕ್ತರ ಸೇವೆಗಾಗಿ ವಿನಯೋಗಿಸಿಕೊಂಡರು. ಭೋಜನ ಪ್ರಸಾದಕ್ಕಾಗಿ ಭಕ್ತರಿಗೆ ಷಣ್ಮುಖ ಪ್ರಸಾದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಕೂಡ ಬಫೆ ಸಿಸ್ಟಮ್ ಮಾಡಲಾಗಿತ್ತು.

ತುಂಬಿ ತುಳುಕಿದ ವಾಹನ ಪಾರ್ಕಿಂಗ್ ಪ್ರದೇಶಗಳು : ವಾಹನ ಪಾರ್ಕಿಂಗ್ ಪ್ರದೇಶಗಳು ಎಲ್ಲೆಡೆಯಲ್ಲಿ ಭರ್ತಿಯಾಗಿದ್ದು, ಇತ್ತ ಸವಾರಿ ಮಂಟಪದ ಪಾರ್ಕಿಂಗ್ ಪ್ರದೇಶ, ಮುಖ್ಯ ರಸ್ತೆಯ ರಥಬೀದಿಯಲ್ಲಿರುವ ಪಾರ್ಕಿಂಗ್ ಪ್ರದೇಶಗಳು, ಬಸ್ ಸ್ಟ್ಯಾಂಡ್ ಎದುರುಗಡೆಯ ವಿಶಾಲವಾದ ಪಾರ್ಕಿಂಗ್ ಪ್ರದೇಶ,ಆದಿ ಸುಬ್ರಹ್ಮಣ್ಯ ದೇವಳದ ಸುತ್ತು ಮುತ್ತಲಿನ ಪಾರ್ಕಿಂಗ್ ಪ್ರದೇಶಗಳಲ್ಲೂ ಭಕ್ತರ ವಾಹನಗಳಿಂದ ತುಂಬಿ ತುಳುಕುತ್ತಿದ್ದವು. ಕ್ಷೇತ್ರಕ್ಕೆ ಬಂದ ಹೆಚ್ಚಿನ ಭಕ್ತರು ತಮ್ಮ ತಮ್ಮ ವಾಹನಗಳಲ್ಲಿ ಬೆಳಿಗ್ಗೆಯಿಂದಲೇ ಬಂದು ಮಧ್ಯಾಹ್ನ ದೇವರ ದರ್ಶನ, ಹರಕೆ, ಪೂಜೆ ಹಾಗೂ ಭೋಜನ ಸ್ವೀಕರಿಸಿ ತೆರಳುತ್ತಿದ್ದು ಕಂಡು ಬಂತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading