ಸುಳ್ಯ: ಶ್ರೀ ಶಾರದಾಂಬೆಯ ವೈಭವದ ಶೋಭಾಯಾತ್ರೆ – ಮೆರುಗು ನೀಡಿದ ನೃತ್ಯ ತಂಡಗಳು

. . . . . . . . .

ಅ.16ರಿಂದ ಅದ್ದೂರಿಯಾಗಿ ಆರಂಭಗೊಂಡ ಸುಳ್ಯ ದಸರಾ ಉತ್ಸವವದ ಕೊನೆಯ ಅಂಗವಾಗಿ  ಅ.24 ರಂದು ಶ್ರೀ ಶಾರದಾಂಬ ದೇವಿಯ ವೈಭವದ ಶೋಭಾಯಾತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ತಿಕ್ ದೇವರಗುಂಡ, ಡಾ.ಲೀಲಾಧರ್ ಡಿ.ವಿ., ನಾರಾಯಣ ಕೇಕಡ್ಕ, ಗೋಕುಲ್ ದಾಸ್,ಕೃಷ್ಣ ಕಾಮತ್, ರಾಜು ಪಂಡಿತ್, ಲತಾ ಮಧುಸೂಧನ್, ಸುನಿಲ್ ಕೇರ್ಪಳ ಮತ್ತಿತರರಿದ್ದರು.

. . . . . . .

. ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿಗಳ ಆಶ್ರಯದಲ್ಲಿ 9 ದಿನಗಳ ಕಾಲ ಶಾರದೋತ್ಸವ ನಡೆಯಿತು.

ಶೋಭಾಯಾತ್ರೆಯಲ್ಲಿ ಆಕರ್ಷಣೀಯ ಟ್ಯಾಬ್ಲೊ ಸೇರಿದಂತೆ ಚಂಡೆ ವಾದನ , ವಾಯಲಿನ್ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ನೃತ್ಯ ತಂಡಗಳು ಭಾಗವಹಿಸಿ ಈ ಬಾರಿಯ ದಸರಾ ಸಂಭ್ರಮಕ್ಕೆ ಮೆರುಗು ನೀಡಿದೆ. ಮಳೆಯ ನಡುವೆಯು ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು..


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading