ತೊಡಿಕಾನ ಹರ್ಲಡ್ಕದಲ್ಲಿ ಆನೆ ಮರಿ ಸಾವು – ಅಧಿಕಾರಿಗಳ ಸಮ್ಮುಖ ಮರಣೋತ್ತರ ಪರೀಕ್ಷೆ

ಸುಳ್ಯ: ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಹೆಣ್ಣು ಆನೆ ಮರಿಯೊಂದು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

. . . . . . . . .

ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ಭಾಗಮಂಡಲದ ಮೀಸಲು ಅರಣ್ಯದಿಂದ ಆನೆಗಳ ಹಿಂಡು ಚಂದ್ರಶೇಖರ ಅವರ ತೋಟಕ್ಕೆ ಆಗಮಿಸಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಮಾಡಿದೆ.

. . . . . . .

ತೋಟವು ಎತ್ತರದ ಪ್ರದೇಶದಲ್ಲಿರುವುದರಿಂದ ಆನೆಗಳ ಹಿಂಡು ವಾಪಸ್ ಕಾಡಿಗೆ ತೆರಳುವ ಸಂದರ್ಭದಲ್ಲಿ ಮರಿಯಾನೆಯೊಂದು ಜಾರಿ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯಾನೆಯನ್ನು ಮೆಟ್ಟಿರುವ ಪರಿಣಾಮ ಅದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

ಪಶು ವೈದ್ಯಾಧಿಕಾರಿ ಡಾ| ನಿತಿನ್ ಪ್ರಭು ಅಚರು ಮರಣೋತ್ತಮ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಆರ್ ಎಫ್ ಓ ನಿರಂಜನ್, ಸಂಪಾಚೆ ವಲಯ ಡಿ ಆರ್ ಎಫ್ ಓ ವೆಂಕಟೇಶ್, ಇಟಿಎಫ್ ತಂಡದ ಡಿ ಆರ್ ಎಫ್. ಓ. ಸಂದೀಪ್, ದೀಪಕ್ ಹಾಗೂ ಇಟಿಎಫ್ ತಂಡದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading