ಸುಳ್ಯವ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಪ್ರಯುಕ್ತ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ವರ್ಷದ ಪಟ್ಟಾಭಿಷೇಕದ ಪ್ರಯುಕ್ತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಳ್ಯ ವಲಯದ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿಕೃಷ್ಣ ವಲಂಬಾಡಿತ್ತಾಯರವರ ಅರ್ಚಕತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಪಂಚಾರತಿ ನೆರವೇರಿಸಲಾಯಿತು. ಫಲಪುಷ್ಪ ಹಾಗೂ ತಾಂಬೂಲ ಸಮರ್ಪಿಸಿ ಪೂಜ್ಯರ ಆರೋಗ್ಯ, ಆಯುರಾರೋಗ್ಯ ಹಾಗೂ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಲಯದ ಮೇಲ್ವಿಚಾರಕ ದಿನೇಶ್ ಡಿ., ಸುಳ್ಯ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ರತೀಶನ್, ಘಟಕದ ಸಂಯೋಜಕ ಸುರೇಶ್ ಹಾಗೂ ಸದಸ್ಯರಾದ ಬಾಲಚಂದ್ರ, ದಿನೇಶ್, ಹರಿಪ್ರಸಾದ್, ಪ್ರೀತಿಕ್, ಯೋಗೀಶ್, ಚಿದಾನಂದ, ಶರತ್, ಗುರುರಾಜ್ ಮತ್ತು ಲವಕುಮಾರ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading