ಅರಂತೋಡು ಶಾಖೆಗೆ 5 ಗುತ್ತಿಗೆ ಗ್ಯಾಂಗ್‌ಮೆನ್‌ಗಳ ನೇಮಕ : ಪ್ರತಿಭಟನೆ ಕೈಬಿಡುವಂತೆ ಮೆಸ್ಕಾಂ ಮನವಿ

ಸುಳ್ಯ : ಮೆಸ್ಕಾಂ ಸುಳ್ಯ ಉಪವಿಭಾಗದ ಅರಂತೋಡು ಶಾಖೆಯಲ್ಲಿ ಪವರ್‌ಮೆನ್‌ಗಳ ಕೊರತೆಯಿಂದ ಸಂಪಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ಹಾಗೂ ಮರ್ಕಂಜ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ಐದು ಗುತ್ತಿಗೆ ಆಧಾರಿತ ಗ್ಯಾಂಗ್‌ಮೆನ್‌ಗಳ ಸೇವೆಯನ್ನು ಪಡೆಯಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

. . . . . . . . .

ಅರಂತೋಡು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪವರ್‌ಮೆನ್‌ಗಳು ವರ್ಗಾವಣೆಗೊಂಡಿದ್ದು, ಹೊಸದಾಗಿ ನೇಮಕಾತಿ ಆಗದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಅಕ್ಟೋಬರ್ 26ರೊಳಗೆ ಇಲಾಖೆ ಸ್ಪಂದಿಸದಿದ್ದಲ್ಲಿ ಅಕ್ಟೋಬರ್ 27ರಂದು ಸುಳ್ಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಿ.ಕೆ. ಹಮೀದ್ ಗೂನಡ್ಕ ಅವರು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದರು.

. . . . . . .

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮೆಸ್ಕಾಂ, ಅರಂತೋಡು ಶಾಖೆಗೆ ಹೆಚ್ಚುವರಿಯಾಗಿ ಐದು ಗುತ್ತಿಗೆ ಆಧಾರಿತ ಗ್ಯಾಂಗ್‌ಮೆನ್‌ಗಳ ಸೇವೆ ಪಡೆಯಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಪವರ್‌ಮೆನ್ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಜೂನಿಯರ್ ಪವರ್‌ಮೆನ್‌ಗಳನ್ನು ಒದಗಿಸಿಕೊಡುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.ಆದ್ದರಿಂದ ಅಕ್ಟೋಬರ್ 27ರಂದು ಮೆಸ್ಕಾಂ ಸುಳ್ಯ ಉಪವಿಭಾಗದ ಕಚೇರಿಗೆ ಹಾಕಲು ಉದ್ದೇಶಿಸಿರುವ ಮುತ್ತಿಗೆಯನ್ನು ಕೈಬಿಡುವಂತೆ ಮೆಸ್ಕಾಂ ಮನವಿ ಮಾಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading