ಸುಳ್ಯದಲ್ಲಿ SSLC ಮತ್ತು PUC ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಈ ಕಾರ್ಯಾಗಾರದಲ್ಲಿ SSLC ಪರೀಕ್ಷೆಯಲ್ಲಿ ಶೇ.96 ಮತ್ತು ಕಳೆದ ವರ್ಷ 2nd PUC{PCMB} ಪರೀಕ್ಷೆಯಲ್ಲಿ ಶೇ. 97 ಅಂಕಗಳನ್ನು ಗಳಿಸಿದ ಪ್ರಲೋಜ್ಞ ಪೀರನಮನೆ ಯವರು ತಾನು ಅನುಸರಿಸಿದ ಉತ್ತಮ ಫಲಿತಾಂಶ ಪಡೆಯಲು ಸಹಾಯಕವಾದ ಓದುವ ಕ್ರಮ, ಪುನರಾವರ್ತನೆ, ಸಮಯದ ಸದ್ಬಳಕೆ, ಶಿಸ್ತು ಮತ್ತು ಗುರಿ ನಿಗದಿಯ ಕುರಿತು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.ಕಾರ್ಯಗಾರದಲ್ಲಿ ಪೋಷಕರಿಗೂ ಭಾಗವಹಿಸಲು ಅವಕಾಶವಿದ್ದು “Mind Management” ತರಬೇತುದಾರರಾದ ಲೋಕೇಶ ಪೀರನಮನೆಯವರು ಪೋಷಕರ ಜವಾಬ್ದಾರಿ ಮತ್ತು ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಹೇಗೆ ನಿರ್ಮಿಸುವುದು ವಿಷಯವಾಗಿ ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ.
SSLC ಮತ್ತು PUC ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕಾ ಕೌಶಲ್ಯ, ಏಕಾಗ್ರತೆ, ಸಮಯ ನಿರ್ವಹಣೆ, ಆತ್ಮವಿಶ್ವಾಸ ಹಾಗೂ ಪರೀಕ್ಷಾ ಸಿದ್ಧತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 25ರ ಭಾನುವಾರ ಸುಳ್ಯದಲ್ಲಿ ಒಂದು ದಿನದ ವಿದ್ಯಾರ್ಥಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9:30ರಿಂದ ಸಂಜೆ 4:30ರವರೆಗೆ ಕುರುಂಜಿ ಬಾಗ್‌ನ BEO ಕಚೇರಿ ಮುಂಭಾಗದಲ್ಲಿರುವ ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಪರಿಣಾಮಕಾರಿ ಅಧ್ಯಯನ ವಿಧಾನಗಳು, ನೆನಪಿನ ಶಕ್ತಿಯನ್ನು ಬೆಳೆಸುವ ಅಭ್ಯಾಸಗಳು, ಏಕಾಗ್ರತೆ, ಸಮಯ ನಿರ್ವಹಣೆ, ಓದಿನ ವೇಳಾಪಟ್ಟಿ ರೂಪಿಸುವುದು, ಪರೀಕ್ಷೆಗೆ ಸಿದ್ಧತೆ, ಆತ್ಮವಿಶ್ವಾಸ ಮತ್ತು ಒತ್ತಡ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಕೇವಲ ಹೆಚ್ಚು ಗಂಟೆಗಳ ಕಾಲ ಓದುವುದಕ್ಕಿಂತ ಸರಿಯಾದ ವಿಧಾನದಲ್ಲಿ ಓದುವುದು, ಕಲಿತ ವಿಷಯಗಳನ್ನು ನಿಯಮಿತವಾಗಿ ಪುನರಾವರ್ತಿಸುವುದು ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಧ್ಯಯನ ಯೋಜನೆ ರೂಪಿಸಿಕೊಳ್ಳುವುದು ಮುಖ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
SSLC ಮತ್ತು PUC ಹಂತಗಳು ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಹಾಗೂ ವೃತ್ತಿ ಆಯ್ಕೆಗೆ ಮಹತ್ವದ ಘಟ್ಟಗಳಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ. 45 ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದ್ದು ಇನ್ನು ಕೆಲವೇ ಸೀಟುಗಳು ಲಭ್ಯವಿದೆ.
ಕಾರ್ಯಕ್ರಮದ ವಿವರಗಳು
ದಿನಾಂಕ : ಅಕ್ಟೋಬರ್ 25, ಭಾನುವಾರ
ಸಮಯ: ಬೆಳಿಗ್ಗೆ 9:30ರಿಂದ ಸಂಜೆ 4:30ರವರೆಗೆ
ಸ್ಥಳ : ಸಂಧ್ಯಾ ರಶ್ಮಿ ಸಭಾಭವನ, BEO ಕಚೇರಿ ಮುಂಭಾಗ, ಕುರುಂಜಿ ಬಾಗ್, ಸುಳ್ಯ
ಮುಂಚಿತವಾಗಿ ನೋಂದಾವಣೆ ಕಡ್ಡಾಯ PH : 814 7870 814
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/N6nvEvlkcvI?si=D21S3OP_c7WV4WGy
SSLC ಮತ್ತು PUC ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading