ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ ಅ.22ರವರೆಗೆ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಘೋಷಿಸಲಾಗಿದ್ದ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಅಕ್ಟೋಬರ್ 22ರವರೆಗೆ ಮುಂದುವರಿಸಲಾಗಿದೆ.

. . . . . . . . .

ಅಕ್ಟೋಬರ್ 21ರಂದು ಐತಿಹಾಸಿಕ ದಸರಾ ಹಬ್ಬದ ಪೂಜೆ ಹಾಗೂ ಮೆರವಣಿಗೆಯ ಅಂತಿಮ ದಿನವಾಗಿದ್ದು, ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಮಕ್ಕಳು ಹಾಗೂ ಪೋಷಕರು ಭಾಗವಹಿಸುತ್ತಾರೆ. ಅಲ್ಲದೆ, ದೂರದ ಜಿಲ್ಲೆಗಳಿಗೆ ತೆರಳಿರುವ ಮಕ್ಕಳು ಹಾಗೂ ಪೋಷಕರು ಮರಳಿ ಬಂದು ತಲುಪಲು ವಿಳಂಬವಾಗುವ ಸಾಧ್ಯತೆ ಇರುವುದರಿಂದ, ಅಕ್ಟೋಬರ್ 22ರಂದು ಶಾಲೆಗಳು ಪುನರಾರಂಭವಾದರೆ ಮಕ್ಕಳು ಶಾಲೆಗೆ ಹಾಜರಾಗಲು ತೊಂದರೆಯಾಗಬಹುದು ಎಂದು ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು.

. . . . . . .

ಈ ಮನವಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಅಕ್ಟೋಬರ್ 3ರಿಂದ 21ರವರೆಗೆ ಘೋಷಿಸಲಾಗಿದ್ದ ರಜೆಯನ್ನು ಇದೀಗ ಅಕ್ಟೋಬರ್ 22ರವರೆಗೆ ವಿಸ್ತರಿಸಲಾಗಿದೆ. ಹೆಚ್ಚುವರಿಯಾಗಿ ನೀಡಲಾದ ಒಂದು ದಿನದ ರಜೆಯನ್ನು ಸರಿದೂಗಿಸಲು, ಶಾಲಾ ಮುಖ್ಯ ಶಿಕ್ಷಕರ ವಿವೇಚನೆಯಲ್ಲಿ ನೀಡಲಾಗುವ ನಾಲ್ಕು ಸ್ಥಳೀಯ ರಜೆಗಳ ಪೈಕಿ ಒಂದು ರಜೆಯನ್ನು ಬಳಸಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading