ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ

ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಹೊಲಿಗೆ ತರಬೇತಿ ಸಹಕಾರಿ: ರಾಮಕೃಷ್ಣ ಮಲ್ಲಾರ

. . . . . . . . .

ಸುಬ್ರಹ್ಮಣ್ಯ: ರೈತ ಯುವಕಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಆರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅ.20ರಂದು ನಡೆಯಿತು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಸುಬ್ರಹ್ಮಣ್ಯದ ಪೂರ್ವ ಅಧ್ಯಕ್ಷ ರೊಟೇರಿಯನ್ ಎಂ.ಪಿ.ಎಚ್.ಎಫ್. ಜಯಪ್ರಕಾಶ್, ಟ್ರಸ್ಟ್‌ನ ಉಪಾಧ್ಯಕ್ಷ ಶಿವರಾಂ ಚಿದ್ಗಲ್, ಖಜಾಂಚಿ ನಾಗರಾಜ್ ಪರಮಲೆ ಹಾಗೂ ಹೊಲಿಗೆ ತರಬೇತುದಾರೆ ಮೀನಾಕ್ಷಿ ಪರಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಜಯಪ್ರಕಾಶ್ ಮಾತನಾಡಿ, ರೈತ ಯುವಕಮಂಡಲ ಚಾರಿಟೇಬಲ್ ಟ್ರಸ್ಟ್ ಈ ಪರಿಸರದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಟ್ರಸ್ಟ್‌ನ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಲ್ಲಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ವಾವಲಂಬಿ ಬದುಕು ಅತ್ಯಂತ ಮಹತ್ವದ್ದಾಗಿದೆ. ಈ ತರಬೇತಿಯ ಮೂಲಕ ಕಲಿತ ವಿದ್ಯೆಯು ತರಬೇತಿ ಪಡೆದವರ ಬದುಕಿಗೆ ಆಸರೆಯಾಗಲಿ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಟ್ರಸ್ಟ್‌ನ ವತಿಯಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಾದ ಧನ್ಯಶ್ರೀ ಕೊಂಬಾರು, ಪೂಜಾ ಪರಮಲೆ, ಹಂಸಿಕಾ ಬಾಲಾಡಿ ಹಾಗೂ ಅನಿತಾ ಉಜಿರಡ್ಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಹಾಗೂ ಪ್ರಶಿಕ್ಷಣಾರ್ಥಿಗಳ ವತಿಯಿಂದ ಹೊಲಿಗೆ ತರಬೇತುದಾರೆ ಮೀನಾಕ್ಷಿ ಪರಮಲೆ ಅವರನ್ನು ಸನ್ಮಾನಿಸಲಾಯಿತು.

ಪ್ರಶಿಕ್ಷಣಾರ್ಥಿಗಳಾದ ಹಂಸಿಕಾ ಮತ್ತು ಅನಿತಾ ಪ್ರಾರ್ಥಿಸಿದರು. ಟ್ರಸ್ಟ್‌ನ ನಿರ್ದೇಶಕ ಚಂದ್ರಶೇಖರ್ ನಾಯರ್ ಸ್ವಾಗತಿಸಿದರು. ಉಪಾಧ್ಯಕ್ಷ ಶಿವರಾಂ ಚಿದ್ಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಭರತ್ ನೆಕ್ರಾಜೆ ವಂದಿಸಿದರು. ನಿರ್ದೇಶಕ ವಿಜಯಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು.

ಟ್ರಸ್ಟ್‌ನ ನಿರ್ದೇಶಕರಾದ ಮೋಹನ್ ಕೋಟಿಗೌಡನ ಮನೆ, ಕುಮಾರ್ ಪುರಲುಪಾಡಿ ಹಾಗೂ ಶಿವಪ್ರಸಾದ್ ಮಾದನ ಮನೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading