ನವರಾತ್ರಿಯಂದು ಕುಲ್ಕುಂದ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಅಕ್ಟೋಬರ್ 18 : ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಸೇತುವೆಯಿಂದ ಕುಲ್ಕುಂದ ಭಾಗದವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಕಸ ಕಡ್ಡಿ,ಶತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತಟ್ಟೆಗಳು, ಬಾಟಲ್ ಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಶೇಖರಿಸಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕರಾದ ಡಾ. ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗೌಡ ಅತ್ಯಾಡಿ, ಗೋಪಾಲ್ ಎಣ್ಣೆಮಜಲು ಹಾಗೂ ದಿನೇಶ್ ಕೈಕಂಬ ಅವರು “ನಾಗಾರಾಧನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಅಸಂಖ್ಯಾ ಭಕ್ತಾದಿಗಳು ಎಲ್ಲಿಂದರಲ್ಲಿ ಎಸೆಯುತ್ತಿರುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದಕ್ಕೆ ಎಸೆಯದೇ ತಮ್ಮ ತಮ್ಮ ವಾಹನಗಳಲ್ಲಿ ಅಥವಾ ಬ್ಯಾಗಿನಲ್ಲಿ ತಾವೇ ಅದನ್ನು ಬೇರೆ ಕಡೆ ಇರುವ ಕಸದ ತೊಟ್ಟಿಯಲ್ಲಿ ಹಾಕಬೇಕು ಹಾಗೂ ಕುಕ್ಕೆ ಕ್ಷೇತ್ರದ ಸ್ವಚ್ಛತೆಯನ್ನು ಕಾಪಡಬೇಕು. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ. ಸ್ವಚ್ಛತೆ ಇದ್ದಲ್ಲಿ ನಾವು ಶುದ್ಧವಾದ ಗಾಳಿ, ನೀರು ಹಾಗೂ ಆಹಾರವನ್ನು ಸೇವಿಸಲು ಅನುಕೂಲವಾಗುತ್ತದೆ. ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾದಿಗಳು ಇನ್ನು ಮುಂದಿನ ದಿನಗಳಲ್ಲಿ ತಾವು ಜಾಗೃತರಾಗುವುದರೊಂದಿಗೆ ಇತರರಿಗೂ ಜಾಗೃತಿಯನ್ನು ಮೂಡಿಸಬೇಕು” ಎಂದು ಕಿವಿಮಾತು ಹೇಳಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading