ಬೆಂಗಳೂರು : ರಾಜ್ಯ ಮಟ್ಟದ “ಪರಿಸರ ಅರಿವು ತಾರೆ” ಗೌರವ ಸ್ವೀಕರಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಅಭಿಲಾಷಾ ಮೋಟ್ನೂರು

ಸುಳ್ಯ ತಾಲೂಕಿನ ಗುತ್ತಿಗಾರು ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಎಸ್.ಎಂ ರವರು ಅ.17 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ನೇಚರ್ ಕನ್ಸರ್ವೇಷನ್ ಫೌಂಡೇಶನ್-ಅರ್ಲಿ ಬರ್ಡ್ 30ನೇ ವಾರ್ಷಿಕೋತ್ಸವದ ಅರಿವು ಕೇಂದ್ರ ಮೇಲ್ವಿಚಾರಕರಿಗೆ ಗೌರವ ನಮನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾಮಹಾದೇವನ್ ದಾಸ್ ಗುಪ್ತ ಇವರಿಂದ ರಾಜ್ಯ ಮಟ್ಟದ “ಪರಿಸರ ಅರಿವು ತಾರೆ” ಗೌರವ ಸ್ವೀಕರಿಸಿದರು.
ಗ್ರಾಮೀಣ ಗ್ರಂಥಾಲಯ ಅರಿವು ಕೇಂದ್ರದ ಮೂಲಕ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ, ಪಕ್ಷಿ ವೀಕ್ಷಣೆ ಹಾಗೂ ಪರಿಸರ ಜಾಗೃತಿಗೆ ಸಂಬಂಧಿಸಿದ ವಿಶಿಷ್ಟ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇವರ ಸೇವೆಯನ್ನು ಗುರುತಿಸಿ “ಅರ್ಲಿ ಬರ್ಡ್ ನೇಚರ್ ಕನ್ಸರ್ವೇಷನ್ ಫೌಂಡೇಶನ್” ಈ ಗೌರವವನ್ನು ನೀಡಿದೆ. ಬೆಂಗಳೂರಿನ ದೋಮ್ಲೂರು ಎರಡನೇ ಹಂತದಲ್ಲಿರುವ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್(ಬಿ.ಐ.ಸಿ) ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ 10 ವಿವಿಧ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಪಕ್ಷಿ ವೀಕ್ಷಣೆಗೆ ಬೈನಾಕ್ಯುಲರ್ ಮತ್ತು ಪುಸ್ತಕ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಅರ್ಲಿ ಬರ್ಡ್ ತಂಡದ ಅಭಿಷೇಕ್, ದೀಪ್ತಿ, ತನ್ಮಯಿ ಹಾಗೂ ಅರವಿಂದ್ ಕುಡ್ಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading