ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಜ್ಞಾನದೀಪ ಸಂಸ್ಥೆಯಿಂದ ಪಾರ್ಶ್ವವಾಯು ಪೀಡಿತ ಜಯರಾಮ ರೈಗೆ ನೆರವು

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ಆಯೋಜಿಸಲಾದ ನವರಂಗ್ ನಮ್ಮ ಹಬ್ಬ ನಮ್ಮ ಸೇವೆ ಕಾರ್ಯಕ್ರಮದ ಅಂಗವಾಗಿ ಪಾರ್ಶ್ವವಾಯು ಪೀಡಿತ ಬೆಳ್ಳಾರೆ ತಡಗಜೆಯ ಜಯರಾಮ ರೈ ಅವರಿಗೆ ಆಹಾರದ ಕಿಟ್ ಮತ್ತು ಸಹಾಯಧನ ವಿತರಿಸಲಾಯಿತು. ಕಳೆದ ಒಂದು ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿ ಟೈಲರ್ ವೃತ್ತಿ ನಡೆಸಲಾಗದೆ ಸಂಕಷ್ಟದಲ್ಲಿರುವ ಜಯರಾಮ ರೈ ಅವರ ಮನೆಯ ಪರಿಸ್ಥಿತಿಯನ್ನು ಅರಿತು ನೆರವು ನೀಡಲಾಯಿತು. ಈ ಸಂದರ್ಭದಲ್ಲಿ  

. . . . . . . . .

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಕಾರ್ಯದರ್ಶಿ ಪ್ರಶಾಂತ್ ಟಿ ಎಂ ಪೂರ್ವಾಧ್ಯಕ್ಷರುಗಳಾದ ರವೀಂದ್ರ ಗೌಡ, ವಿನಯ್ ಕುಮಾರ್, ಪದ್ಮನಾಭ ಗೌಡ ಬೀಡು,ಝೋನಲ್ ಲೆಫ್ಟಿಂನೆಂಟ್ ಚಂದ್ರಶೇಖರ್ ರೈ, ರೋಟರಿ ವಲಯ ಸಂಯೋಜಕ ಶಶಿಧರ್ ಬಿ ಕೆ, ರೋಹಿತ್ ರೈ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರೋಶನ್ ಫೆರ್ನಾಂಡಿಸ್,ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ,ಉಪನ್ಯಾಸಕ ಲೋಕೇಶ್ ಎಂ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading