ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗಳಿಗೆ ವಿಶೇಷ ಬಡ್ಡಿದರ ; ಸ್ವರ್ಣನಿಧಿ ಎಫ್‌ಡಿ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ. 12ರ ಬಡ್ಡಿ

ಸುಳ್ಯ: ಇಲ್ಲಿನ ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಠೇವಣಿ ಬಡ್ಡಿದರದ ಕೊಡುಗೆಯನ್ನು ಘೋಷಿಸಿದೆ.

. . . . . . . . .

ಸಂಸ್ಥೆಯು ಅಕ್ಟೋಬರ್ 31ರವರೆಗೆ ಇರಿಸಲಾಗುವ ಹೊಸ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ನೀಡಲು ನಿರ್ಧರಿಸಿದೆ. ಇದರಂತೆ, ಒಂದು ವರ್ಷದ ಸ್ವರ್ಣನಿಧಿ ಸ್ಥಿರ ಠೇವಣಿ (ಎಫ್‌ಡಿ)ಗೆ ಹಿರಿಯ ನಾಗರಿಕರಿಗೆ ಶೇ. 12 ಮತ್ತು ಜನಸಾಮಾನ್ಯರಿಗೆ ಶೇ. 11.50 ಬಡ್ಡಿದರ ನೀಡಲಾಗುತ್ತದೆ. ಅದೇ ರೀತಿ, ಒಂದು ವರ್ಷ ಮತ್ತು ಮೇಲ್ಪಟ್ಟ ಅವಧಿಯ ಸ್ವರ್ಣಧಾರ ಮರುಕಳಿಸುವ ಠೇವಣಿ (ಆರ್‌ಡಿ)ಗೆ ಶೇ. 11ರ ಬಡ್ಡಿದರ ನೀಡಲಾಗುತ್ತದೆ. ಅಲ್ಲದೆ, ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಇರಿಸುವ ಗ್ರಾಹಕರಿಗೆ ಉಚಿತ ಬೆಳ್ಳಿ ನಾಣ್ಯವನ್ನು ನೀಡಲಾಗುತ್ತದೆ.

. . . . . . .

ಸಂಸ್ಥೆಯಲ್ಲಿ ಚಿನ್ನಾಭರಣ ಅಡಮಾನ ಸಾಲದ ಸೌಲಭ್ಯವೂ ಲಭ್ಯವಿದ್ದು, ಪ್ರತಿ ಗ್ರಾಂ ಚಿನ್ನಕ್ಕೆ ಆಕರ್ಷಕ ದರದಲ್ಲಿ, ಯಾವುದೇ ಸೇವಾ ಶುಲ್ಕವಿಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸಂಸ್ಥೆಯು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಸಾರ್ವಜನಿಕರು ಈ ವಿಶೇಷ ಠೇವಣಿ ಯೋಜನೆ ಹಾಗೂ ಸಾಲ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading