ಮಂಗಳೂರು ಕೋಣಾಜೆ ಯಲ್ಲಿ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ” ಪ್ರಜಾ ಸೇವೆ ಆಂದೋಲನ ” | ಸುಳ್ಯದ ಸಮಸ್ಯೆ ಮತ್ತು ಬೇಡಿಕೆಗಳ ಹಲವು ಮನವಿ ಸಲ್ಲಿಕೆ ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಭಾಗಿ

ಕರ್ನಾಟಕ ಸರ್ಕಾರದ ಮಂತ್ರಿಮುಖ್ಯ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ಜನರ ಬಳಿಗೆ ಸರಕಾರ ಇರಲಿ ನಿಮ್ಮ ಸಹಕಾರ ಎಂಬ ಘೋಷ ವಾಕ್ಯದ ಪ್ರಜಾ ಸೇವೆ ಆಂದೋಲನ ಮಂಗಳೂರು ಕೋಣಾಜೆ ವಿ.ವಿ. ಸಭಾಂಗಣದಲ್ಲಿ ಜರಗಿತು‌.

. . . . . . . . .

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯು.ಟಿ. ಖಾದರ್ ರವರು ಅಧ್ಯಕ್ಷತೆ ವಹಿಸಿ ಜನರ ಮನವಿಗಳಿಗೆ ಸ್ಪಂದಿಸಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಪರಿಹಾರ ಸೂಚಿಸಿ ವಿಲೇವಾರಿ ಮಾಡಿದರು.

. . . . . . .

ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಸುಳ್ಯದಿಂದ ಅಲ್ಲಿಗೆ ತೆರಳಲು ಅನಾನುಕೂಲ ಇದ್ದ ಜನರ ಅಹವಾಲುಗಳನ್ನು ಪಡೆದು ಪ್ರಜಾ ಸೇವೆ ಆಂದೋಲನದಲ್ಲಿ ಸಚಿವರಿಗೆ ಸಲ್ಲಿಸಿದರು. ಪಹಣಿ ತಿದ್ದುಪಡಿ, ಬೆಳ್ಳಾರೆ ಮಾರ್ಗ ವಾಗಿ ಪೈಲಾರು ಜಬಳೆ ಮೂಲಕ ಗುತ್ತಿಗಾರು ಮೂಲಕ ಬಾಳುಗೋಡಿಗೆ ಬಸ್ ಸರ್ವಿಸ್, ಅರಣ್ಯದಲ್ಲಿ ಹಾದು ಹೋಗುವ ರಸ್ತೆ ದುರಸ್ತಿಗೆ ಅನುಮತಿ, ಪೋಡಿ ದುರಸ್ತಿ, ಸುಳ್ಯ ನಗರ ವ್ಯಾಪ್ತಿಯ ರಸ್ತೆಗಳ ಮಳೆಗಾಲ ನಂತರದ ವಾರ್ಷಿಕ ದುರಸ್ತಿ ಪ್ಯಾಚ್ ವರ್ಕ್ ಮೊದಲಾದ ಮನವಿಗಳು ಸಲ್ಲಿಕೆಯಾದವುಗಲ್ಲಿ ಪ್ರಮುಖ ವಾಗಿರುತ್ತದೆ ಎಂದು ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ತಿಳಿಸಿರುತ್ತಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading