ಹರಿಹರ ಪಳ್ಳತ್ತಡ್ಕ : ಅ.23 ರಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ; ಲಸಿಕೆ ನೀಡುವ ಸ್ಥಳಗಳ ವಿವರ ಇಲ್ಲಿದೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಗ್ರಾಮ ಪಂಚಾಯತ್ ಹರಿಹರ ಪಳ್ಳತ್ತಡ್ಕ ಇದರ ಸಹಯೋಗದಲ್ಲಿ ಅ.23 ಶುಕ್ರವಾರದಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ನಡೆಯಲಿದೆ.
ಪೂರ್ವಾಹ್ನ 10:00 ರಿಂದ 10:15 ರವರೆಗೆ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವಠಾರದಲ್ಲಿ, 10:15 ರಿಂದ 10:25 ರವರೆಗೆ ಕಜ್ಜೋಡಿ ಬಸ್ ತಂಗುದಾಣದ ಬಳಿ, 10:25 ರಿಂದ 10:40 ರವರೆಗೆ ಕಲ್ಲೇಮಠ ಗ್ರಂಥಾಲಯದ ಬಳಿ, 10:50 ರಿಂದ 11:00 ರವರೆಗೆ ಉಪ್ಪುಕಳ ಕೃಷ್ಣ(ಭಗವಾನ್)ರ ಮನೆ ಬಳಿ, 11:05 ರಿಂದ 11:15 ರವರೆಗೆ ಕೊತ್ನಡ್ಕ ಅಂಗನವಾಡಿ ಬಳಿ, 11:20 ರಿಂದ 11:30 ರವರೆಗೆ ಮಾನಡ್ಕ ಗೋಪಾಲ ಮಾಸ್ತರ್ ಮನೆ ಬಳಿ, 11:35 ರಿಂದ 11:45 ರವರೆಗೆ ಬಸವನಗುಡಿ ವನಿತಾರವರ ಅಂಗಡಿ ಬಳಿ, 11:50 ರಿಂದ 12:00 ರವರೆಗೆ ಪದಕ ಬಸ್ ತಂಗುದಾಣದ ಬಳಿ, ಅಪರಾಹ್ನ 12:00 ರಿಂದ 12:15 ರವರೆಗೆ ಬೆಟ್ಟುಮಕ್ಕಿ ಮೈದಾನದ ಬಳಿ, 12:15 ರಿಂದ 12:30 ರವರೆಗೆ ದೇವರುಳಿಯ ಹೊಸ ನೀರಿನ ಟ್ಯಾಂಕ್ ಬಳಿ, 12:40 ರಿಂದ 12:50 ರವರೆಗೆ ರೇಗನ್ ಶೆಟ್ಯಡ್ಕ ರವರ ಮನೆಯ ಬಳಿ, 1:00 ರಿಂದ 1:10 ರವರೆಗೆ ಮಲ್ಲಾರ ಬಸ್ ತಂಗುದಾಣದ ಬಳಿ ಹಾಗೂ 1:15 ರಿಂದ 1:30 ರವರೆಗೆ ಹರಿಹರ ದೇವಸ್ಥಾನದ ಬಸ್ ತಂಗುದಾಣದ ಬಳಿ ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಈ ಲಸಿಕೆ ಹಾಕುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳಬೇಕು, ಲಸಿಕಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading