55 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ – ಸುಳ್ಯ ದಸರಾ ಉತ್ಸವಕ್ಕೆ ಚಾಲನೆ – ಮೆರವಣಿಗೆಯಲ್ಲಿ ಸಾಗಿ ಬಂದ ಶಾರದಾ ದೇವಿ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (ರಿ.), ದಸರಾ ಉತ್ಸವ ಸಮಿತಿ ಹಾಗೂ ತಾಲೂಕು ಶ್ರೀ ಶಾರದಾಂಬ ಉತ್ಸವ ಸಮಿತಿಗಳ ಆಶ್ರಯದಲ್ಲಿ ನಡೆಯುವ 55ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ 2026 ಕ್ಕೆ ಇಂದು ವಾಲನೆ ನೀಡಲಾಯಿತು.‌ ಅ.16ರಂದು ಬೆಳಿಗ್ಗೆ ಗಂಟೆ 7ಕ್ಕೆ ಗಣಪತಿ ಹವನ ನಡೆದ ಬಳಿಕ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು ದೇವಿಯ ಪ್ರತಿಷ್ಠೆ, ಪೂಜೆ ನೆರವೇರಿತು.

. . . . . . . . .

ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಚ ಗೋಕುಲ್ ದಾಸ್ , ಪ್ರ.ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ‌., ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಎನ್.ಎ.ರಾಮಚಂದ್ರ, ಜಯಪ್ರಕಾಶ್ ರೈ, ಜನಾರ್ಧನ ದೋಳ, ದಸರಾ ಉತ್ಸವ ಸಮಿತಿ ಕೋಶಾಧಿಕಾರಿ ಸುನಿಲ್ ಕುಮಾರ್ ಕೇರ್ಪಳ ಹಾಗೂ ರವಿಚಂದ್ರ ಕೊಡಿಯಾಲಬೈಲು, ಲತಾ ಮಧುಸೂಧನ್ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು , ಭಕ್ತಾಧಿಗಳು ಉಪಸ್ಥಿತರಿದ್ದರು.

. . . . . . .

ಪುರೋಹಿತ ನಾಗರಾಜ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮಧ್ಯಾಹ್ನ ಗಂಟೆ 1ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ 7.30ಕ್ಕೆ ಸುಳ್ಯದ ಶ್ರೀ ಗುರುರಾಘವೇಂದ್ರ ಮಕ್ಕಳ ಕಲಾ ತಂಡದಿಂದ ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಳ್ಳಲಿದೆ.

ಅ.17ರಂದು ಸಂಜೆ 6ಕ್ಕೆ ಶ್ರೀ ದೀಪಾಂಜಲಿ ಮಹಿಳಾ ಭಜನಾ ಮಂಡಳಿ (ರಿ.), ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಡಿ. ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಹಾಗೂ ಎಕ್ಸ್ಟಸಿ ಡ್ಯಾನ್ಸ್ ಕ್ರಿವ್, ಸುಳ್ಯ ಇವರಿಂದ ನೃತ್ಯ ವೈಭವ ಪ್ರಸ್ತುತಗೊಳ್ಳಲಿದೆ.

ಮಕ್ಕಳ ದಸರಾ, ಮಹಿಳಾ ದಸರಾ, ನೃತ್ಯ ವೈಭವಅ.18ರಂದು ಬೆಳಿಗ್ಗೆ 8ರಿಂದ ಮಕ್ಕಳ ದಸರಾ ನಡೆಯಲಿದ್ದು, ಸಂಜೆ 6ಕ್ಕೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 7ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ವಿವಿಧ ಕಲಾವಿದರಿಂದ ನೃತ್ಯ ಸಂಭ್ರಮ ನಡೆಯಲಿದೆ.

ಅ. 19ರಂದು ಮಹಿಳಾ ದಸರಾಅ.19ರಂದು ಬೆಳಿಗ್ಗೆ ಗಂಟೆ 9ಕ್ಕೆ ಮಹಿಳಾ ದಸರಾ ಆಯೋಜಿಸಲಾಗಿದೆ. ಸಂಜೆ 6ಕ್ಕೆ ಶ್ರೀ ಮಿತ್ತೂರು ಉಳ್ಳಾಕುಳು ಮಹಿಳಾ ಭಜನಾ ಮಂಡಳಿ, ಅಮ್ಮೆ ಮಡಿಯಾರ್, ಉಬರಡ್ಕ ಇವರಿಂದ ಭಜನೆ ಹಾಗೂ ಸಂಜೆ 7ಕ್ಕೆ ರಂಗಮಯೂರಿ ಕಲಾಶಾಲೆ (ರಿ.), ಸುಳ್ಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ. 20ರಂದು ಆಯುಧಪೂಜೆಅ. 20ರಂದು ಬೆಳಿಗ್ಗೆ 6ರಿಂದ ಆಯುಧಪೂಜೆ ನಡೆಯಲಿದೆ. ಸಂಜೆ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಹಾಗೂ ಸಾಹಿತ್ಯ ಸಂಗೀತ ಕಲಾ ಕೇಂದ್ರ, ಸುಳ್ಯ ಇವರಿಂದ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7ಕ್ಕೆ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸುಳ್ಯ ಇವರಿಂದ ನೃತ್ಯ ಕಾರ್ಯಕ್ರಮ ಹಾಗೂ ಸಂಜೆ 7.30ಕ್ಕೆ ರಾಜ್ಯದ ನುರಿತ ಕಲಾವಿದರಿಂದ ಹಳೆಯ ಚಿತ್ರಗೀತೆಗಳ ಸಂಗಮ ‘ನೆನಪು ನೀನಾದ’ ಪ್ರಸ್ತುತಗೊಳ್ಳಲಿದೆ.

ಅ.21ರಂದು ಅಕ್ಷರಾಭ್ಯಾಸಅ.21ರಂದು ಬೆಳಿಗ್ಗೆ 6ರಿಂದ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ, ಕಾಯರ್ತೋಡಿ ಇವರಿಂದ ಭಜನೆ ಹಾಗೂ ಸಂಜೆ 7ಕ್ಕೆ ಮಂಗಳೂರಿನ ಸಿಝ್ಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಅ. 22ರಂದು ಚಂಡಿಕಾ ಮಹಾಯಾಗಅ. 22ರಂದು ಸಂಜೆ ಗಂಟೆ 7ರಿಂದ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆ, ದೀಪಾರಾಧನೆ, ಸ್ವಸ್ತಿ ಪುಣ್ಯಾಹ, ಅಗ್ನಿಪ್ರತಿಷ್ಠೆ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನೆರವೇರಲಿದೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ (ರಿ.), ಸುಳ್ಯ ಸಹಕಾರ ನೀಡಲಿದೆ. ರಾತ್ರಿ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಅ.23ರಂದು ‘ಮ್ಯೂಸಿಕ್ ಹಂಗಾಮ–2026’ಅ. 23ರಂದು ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 7ರಿಂದ ಷರಾ ಫೌಂಡೇಶನ್ ಅರ್ಪಿಸುವ ಕಡಲ್ ತಂಡದವರಿಂದ ‘ಮ್ಯೂಸಿಕ್ ಹಂಗಾಮ–2026’ ಅದ್ದೂರಿ ಸಂಗೀತ ರಸಮಂಜರಿ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ಶಾರದಾದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.

ಅ.24ರಂದು ಶಾರದಾದೇವಿಯ ವೈಭವದ ಶೋಭಾಯಾತ್ರೆದಸರಾ ಉತ್ಸವದ ಸಮಾರೋಪದ ಅಂಗವಾಗಿ ಅ. 24ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 3ರಿಂದ ವಿಶೇಷ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಶ್ರೀ ಶಾರದಾದೇವಿಯ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ.ಶೋಭಾಯಾತ್ರೆಯು ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ದೇವಿಯ ಜಲಸ್ತಂಭನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.ಉತ್ಸವದ ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಶ್ರೀ ದೇವಿಯ ಮಹಾಪೂಜೆ ನಡೆಯಲಿದ್ದು, ರಾತ್ರಿ 9 ಗಂಟೆಗೆ ಮಹಾಪೂಜೆ ನೆರವೇರಲಿದೆ. ಧಾರ್ಮಿಕ ಆಚರಣೆಗಳು, ಭಜನೆ, ನೃತ್ಯ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸುಳ್ಯದಲ್ಲಿ ದಸರಾ ಸಂಭ್ರಮ ಮನೆಮಾಡಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading