*ಬೆಳ್ಳಾರೆ ಸ್ವ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಾಗಾರ – ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿ: ಜೇಮ್ಸ್ ಅಬ್ರಹಾಂ*

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ಆಯೋಜಿಸಲಾದ ನವರಂಗ್ ನಮ್ಮ ಹಬ್ಬ ನಮ್ಮ ಸೇವೆ ಕಾರ್ಯಕ್ರಮದ ಅಂಗವಾಗಿ ಜ್ಞಾನದೀಪ ಸಂಸ್ಥೆಯಲ್ಲಿ ಸ್ವ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರುಡ್‌ಸೆಟ್ ಸಂಸ್ಥೆ, ಉಜಿರೆಯ ಹಿರಿಯ ಉಪನ್ಯಾಸಕ  ಜೇಮ್ಸ್ ಅಬ್ರಹಾಂ ಅವರು ಸ್ವ ಉದ್ಯೋಗದ ವಿವಿಧ ಅವಕಾಶಗಳು, ಸ್ವಂತ ಉದ್ಯಮ ಆರಂಭಿಸಲು ಅಗತ್ಯವಾದ ಸಿದ್ಧತೆಗಳು, ಉದ್ಯಮಶೀಲತೆಯ ಗುಣಗಳು ಹಾಗೂ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಮಾರ್ಗಗಳ ಕುರಿತು ಮಾಹಿತಿ ನೀಡಿದರು. ಯುವಜನರು ತಮ್ಮಲ್ಲಿರುವ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಉದ್ಯಮಿ ಮಹಿಳೆ ಸುನೀತಾ ಎ ಸಿ ಅವರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನಿಕಟಪೂರ್ವಾಧ್ಯಕ್ಷ ವಿಶ್ವನಾಥ್ ಕೆ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರೋಶನ್ ಫೆರ್ನಾಂಡಿಸ್, ರೋಟರಿಯ ಝೋನಲ್ ಲೆಫ್ಟಿಂನೆಂಟ್ ಚಂದ್ರಶೇಖರ್ ರೈ, ಇಂಟರ್ಯಾಕ್ಟ್ ಚಯರ್ ಮೆನ್ ಪ್ರಮೋದ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಕಾರ್ಯದರ್ಶಿ ಪ್ರಶಾಂತ್ ಟಿ ಎಂ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಕೀರ್ತನಾ ಪಿ ಉಪಸ್ಥಿತರಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕ ಲೋಕೇಶ್ ಎಂ ವಂದಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading