ಮುತ್ಲಾಜೆ: ಅ.15ರಂದು ದುರ್ಗಾಪೂಜೆ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟ | ಪುರುಷರಿಗೆ 11,111 ರೂ. ಹಾಗೂ ಮಹಿಳೆಯರಿಗೆ 7,777 ರೂ. ಪ್ರಥಮ ಬಹುಮಾನ

ಗುತ್ತಿಗಾರು: ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮುತ್ಲಾಜೆ–ಚಣಿಲ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರದಲ್ಲಿ ದುರ್ಗಾಪೂಜೆಯ ಪ್ರಯುಕ್ತ ಅ.15ರಂದು ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದೆ.

. . . . . . . . .

ಪುರುಷರ ವಿಭಾಗದಲ್ಲಿ. ಪ್ರಥಮ ಬಹುಮಾನ 11,111 ರೂ., ದ್ವಿತೀಯ 7,777 ರೂ., ತೃತೀಯ 2,500 ರೂ. ಹಾಗೂ ಚತುರ್ಥ 2,000 ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ನೀಡಲಾಗುವುದು.

. . . . . . .

ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 7,777 ರೂ. ಹಾಗೂ ದ್ವಿತೀಯ ಬಹುಮಾನ 5,555 ರೂ. ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತಂಡಗಳ ಹೆಸರನ್ನು ನೋಂದಾಯಿಸಲು ಅ.13 ಕೊನೆಯ ದಿನಾಂಕವಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ಸುರೇಶ್ ಮುತ್ಲಾಜೆ (9482474977), ಭರತ್ ಹುಲಿಕೆರೆ (9480253557), ವಿನ್ಯಾಸ್ ಕೊಚ್ಚಿ (9632699777) ಹಾಗೂ ಮಾಧವ ಎರ್ದಡ್ಕ (9448689861) ಅವರನ್ನು ಸಂಪರ್ಕಿಸಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading