ಹರಿಹರ ಪಳ್ಳತ್ತಡ್ಕ : ಅ.24ರಂದು “ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ರಕ್ತದಾನ ಶಿಬಿರ” ; ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಹಾಗೂ ಅಪಘಾತ ವಿಮೆ ನೋಂದಣಿ

ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಅ.24 ಶನಿವಾರದಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ “ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಅಪಘಾತ ವಿಮೆ ನೋಂದಣಿ ಶಿಬಿರ ಮತ್ತು ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಮತ್ತು ರಕ್ತದಾನ ಶಿಬಿರ” ನಡೆಯಲಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಶಿಬಿರವನ್ನು ಉದ್ಘಾಟಿಸಲಿದ್ದು, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ರವಿಚಂದ್ರ ಗೋಳ್ಯಾಡಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ದಿನೇಶ್ ಹಾಲೆಮಜಲು ಉಪಸ್ಥಿತರಿರಲಿದ್ದು, ಮಾಹಿತಿದಾರರಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಸಭಾಪತಿಗಳಾದ ಪಿ.ಬಿ ಸುಧಾಕರ ರೈ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರುಕಟ್ಟೆ ಅಧಿಕಾರಿಗಳಾದ ಗುರುಪ್ರಸಾದ್ ಉಪಸ್ಥಿತರಿರಲಿದ್ದಾರೆ.

ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳು ಈ ಕೆಳಗಿನಂತಿವೆ
ಹೊಸ ಆಧಾರ್ ಕಾರ್ಡ್ ನೋಂದಣಿ : ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಮಗುವಿನ ಜೊತೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು, 18 ವರ್ಷದೊಳಗಿನವರಿಗೆ ಮಾತ್ರ ಹೊಸ ಆಧಾರ್ ನೋಂದಣಿ ಲಭ್ಯ.
ಹೆಸರು ತಿದ್ದುಪಡಿ : ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಸ್.ಎಸ್.ಎಲ್.ಸಿ/ಪಿ.ಯು‌.ಸಿ ಪ್ರಮಾಣಪತ್ರ ಹಾಗೂ ಜನನ ಪ್ರಮಾಣಪತ್ರ(ಅಪ್ರಾಪ್ತರಿಗೆ ಮಾತ್ರ).
ಜನ್ಮದಿನಾಂಕ ತಿದ್ದುಪಡಿ : ಪಾಸ್ ಪೋರ್ಟ್, ಜನನ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಪ್ರಮಾಣಪತ್ರ, ಪಿಂಚಣಿ ಪಾವತಿ ಆದೇಶದ ಮೂಲಪ್ರತಿ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ.
ವಿಳಾಸ ಬದಲಾವಣೆ : ವೋಟರ್ ಐಡಿ, ಪಾಸ್ ಪೋರ್ಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಬ್ಯಾಂಕ್ ಸೀಲ್ ಹಾಗೂ ಫೋಟೋ ಕಡ್ಡಾಯ ಹಾಗೂ ವಾಸ್ತವ್ಯ ದೃಢೀಕರಣ ಪತ್ರ.
ದಾಖಲಾತಿಗಳ ಅಗತ್ಯವಿಲ್ಲದ ತಿದ್ದುಪಡಿಗಳು : ಈಮೇಲ್ ತಿದ್ದುಪಡಿ, ಲಿಂಗ ಬದಲಾವಣೆ, ಮೊಬೈಲ್ ಸಂಖ್ಯೆ ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ಅಪ್ಡೇಟ್(ಫೋಟೋ ಫಿಂಗರ್ ಪ್ರಿಂಟ್)
ಅಂಚೆ ವಿಮೆಗೆ ಬೇಕಾಗುವ ದಾಖಲಾತಿಗಳು : ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಾಮಿನಿಯ ಆಧಾರ್ ಕಾರ್ಡ್.
ಎಲ್ಲಾ ದಾಖಲಾತಿಗಳ ಮೂಲಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು.

ಆಧಾರ್ ಕಾರ್ಡ್ ವಿಳಾಸ ಬದಲಾವಣೆಗೆ ಮತ್ತು ಇತರೆ ತಿದ್ದುಪಡಿಗಳಿಗೆ ಫಾರಂ ಗಳು ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮ ಒನ್ ಕೇಂದ್ರಗಳಲ್ಲಿ ದೊರೆಯುತ್ತದೆ. ಫಾರಂಗೆ ಗೆಜೆಟೆಡ್ ಅಧಿಕಾರಿಗಳ ಸಹಿ ಬೇಕಾಗಿರುವುದರಿಂದ ಅ.23ರ ಒಳಗೆ ತೆಗೆದುಕೊಂಡು ಭರ್ತಿ ಮಾಡಿ ಸಹಿ ಮಾಡಿಸಿ ಇರಿಸಿಕೊಳ್ಳಬೇಕೆಂದು ತಿಳಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 9480156719, 8073499455, 9483781617 ಸಂಪರ್ಕಿಸಬಹುದಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading