ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಅಂಗವಾಗಿ ಸುಳ್ಯದಲ್ಲಿ ಸೇವಾಸೇತು ಅಭಿಯಾನಕ್ಕೆ ಚಾಲನೆ – ಉದ್ಘಾಟನೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಅ.14 ರಿಂದ 16ರವರೆಗೆ ನೋಂದಾಯಿಸಲು ಅವಕಾಶ

ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅಂಗವಾಗಿ ಸುಳ್ಯದಲ್ಲಿ ಸೇವಾಸೇತು ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು. ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಯೋಜನೆ ಚಾಲನೆ ನೀಡಿದರು.‌ಈ ಸಂದರ್ಭದಲ್ಲಿ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಸೆಲ್ಕೋ ಸೋಲಾರ್ ನ ಮ್ಯಾನೇಜರ್ ಅಶಿಕ್ ಹಾಗೂ ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . . . .

ಅ.14 ರಿಂದ 16ರವರೆಗೆ ನೋಂದಾಯಿಸಲು ಅವಕಾಶ

. . . . . . .

ಈ ಯೋಜನೆ ಕುರಿತಾಗಿ ವಿದ್ಯುತ್ ಗ್ರಾಹಕರುಗಳಿಗೆ ಮಾಹಿತಿ ನೀಡಲು ಹಾಗೂ ಸ್ಥಳದಲ್ಲೇ ಅರ್ಜಿ ನೋಂದಾಯಿಸಿ ಯೋಜನೆಯ ಸದುಪಯೋಗಪಡೆದುಕೊಳ್ಳಲು ಸೇವಾ ಸೇತು ಕಾರ್ಯಕ್ರಮವನ್ನು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಅ. 14 ರಿಂದ 16 ರ ವರೆಗೆ ಹಮ್ಮಿಕೊಂಡಿದ್ದು ಗ್ರಾಹಕರು ಪ್ರಯೋಜನ ಪಡೆಯಬಹುದು. ಈ ಕಾರ್ಯಕ್ರಮದಲ್ಲಿ ಅನುಮೋದಿತ ಸೋಲಾರ್ ಮಾರಾಟಗಾರರು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಹಾಜರಿರುವವರಿದ್ದು ಸೋಲಾರ್ ಘಟಕ ಸ್ಪಾಪನೆ ಮತ್ತು ಸಾಲ ಸೌಲಭ್ಯ ದ ಕುರಿತಾಗಿಯೂ ಮಾಹಿತಿ ದೊರೆಯಲಿದೆ.
ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ
ಇದು ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ (Rooftop Solar) ವ್ಯವಸ್ಥೆ ಅಳವಡಿಸಲು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದು. ಸೌರಶಕ್ತಿಯಿಂದ ಮನೆಯ ವಿದ್ಯುತ್ ಅಗತ್ಯವನ್ನು ಪೂರೈಸುವುದು.ವಿದ್ಯುತ್ ಬಿಲ್ ಕಡಿಮೆ ಮಾಡುವುದು.ಅರ್ಹ ಕುಟುಂಬಗಳಿಗೆ ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ/ಕಡಿಮೆ ವೆಚ್ಚದ ವಿದ್ಯುತ್ ಪಡೆಯಲು ಸಹಾಯ ಮಾಡುವುದು.ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಿ ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಸಬ್ಸಿಡಿಗೆ ಅವಕಾಶ
ಸರ್ಕಾರವು ಮನೆ ಮೇಲ್ಚಾವಣಿಯ ಸೌರ ವ್ಯವಸ್ಥೆ ಅಳವಡಿಸಲು ಕೇಂದ್ರ ಹಣಕಾಸು ಸಹಾಯ (ಸಬ್ಸಿಡಿ) ನೀಡುತ್ತದೆ. ಸೌರ ವ್ಯವಸ್ಥೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿಯ ಮೊತ್ತ ಬದಲಾಗುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading