ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್ ನೆಟ್ಟಾರು, ಉಪಾಧ್ಯಕ್ಷರಾಗಿ ನವೀನ್ ರಾಮಕುಮೇರಿ, ಕಾರ್ಯದರ್ಶಿಯಾಗಿ ಹರೀಶ್ ದೋಳ, ಕೋಶಾಧಿಕಾರಿಯಾಗಿ ರಂಜಿತ್ ದರ್ಕಾಸ್

ಸುಳ್ಯ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸುಳ್ಯ ಘಟಕದ ಗುರುಸ್ಪೂರ್ತಿ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆಯು ಅ. 11ರಂದು ರೆಂಜಾಳದ ಲೋಹಿತ್ ರೆಂಜಾಳ ಅವರ ನಿವಾಸದಲ್ಲಿ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

. . . . . . . . .

ಸಭೆಯಲ್ಲಿ ಕಾರ್ಯದರ್ಶಿ ರಂಜಿತ್ ದರ್ಕಾಸ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಹರೀಶ್ ದೋಳ ಲೆಕ್ಕಪತ್ರಗಳ ವಿವರ ನೀಡಿದರು. 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಸಮಿತಿಯ ಶಿವಪ್ರಸಾದ್ ಕೆ.ವಿ. ನಡೆಸಿಕೊಟ್ಟರು.

. . . . . . .

ನೂತನ ಪದಾಧಿಕಾರಿಗಳ ಆಯ್ಕೆಘಟಕದ ನೂತನ ಅಧ್ಯಕ್ಷರಾಗಿ ನೂತನ ಪ್ರವೀಣ್ ನೆಟ್ಟಾರು, ಕಾರ್ಯದರ್ಶಿಯಾಗಿ ಹರೀಶ್ ದೋಳ, ಕೋಶಾಧಿಕಾರಿಯಾಗಿ ರಂಜಿತ್ ದರ್ಕಾಸ್, ಉಪಾಧ್ಯಕ್ಷರಾಗಿ ನವೀನ್ ರಾಮಕುಮೇರಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಲೋಕೇಶ್ ಆಯ್ಕೆಯಾದರು.

ಇತರ ಪದಾಧಿಕಾರಿಗಳ ವಿವರ ಹೀಗಿದೆ:* ವ್ಯಕ್ತಿತ್ವ ನಿರ್ದೇಶಕರು: ಉಮೇಶ್ ಮಣಿಕ್ಕಾರ* ಕ್ರೀಡಾ ನಿರ್ದೇಶಕರು: ಅಶೋಕ್ ಸುವರ್ಣ ಐವರ್ನಾಡು* ಸಮಾಜ ಸೇವಾ ನಿರ್ದೇಶಕರು: ಶಶಿಕಲಾ ಎ. ನೀರಬಿದಿರೆ* ಆರೋಗ್ಯ ನಿರ್ದೇಶಕರು: ಪ್ರಕಾಶ್ ಪಾಲ್ತಾಡು* ಪ್ರಚಾರ ನಿರ್ದೇಶಕರು: ವಿಜೇತ್ ಪರಗುತ್ತು* ವಿದ್ಯಾನಿಧಿ ನಿರ್ದೇಶಕರು: ಸುಂದರ್ ಪೂಜಾರಿ ಸುಳ್ಯ* ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರು: ಪ್ರದೀಪ್ ನೆಟ್ಟಾರು* ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ಶ್ರಾವ್ಯ ಬಿ.ಆರ್.* ಮಹಿಳಾ ಸಂಘಟನಾ ನಿರ್ದೇಶಕರು: ಕುಸುಮ ರೆಂಜಾಳ* ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ರವಿಚಂದ್ರ ಸುವರ್ಣ* ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು: ರಮೇಶ್ ಜಯನಗರಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಾವತಿ ಎ.ಎಸ್., ಬಾಲಕೃಷ್ಣ ತಡಗಜೆ, ಪ್ರಭಾಕರ ಕುತ್ಯಾಡಿ, ಲವಿನ್ ಸುಳ್ಯ ಹಾಗೂ ಚಂದ್ರಾವತಿ ಕಲ್ಪಣೆ ಆಯ್ಕೆಯಾದರು.

ಸಭೆಯಲ್ಲಿ ನೂತನ ತಂಡವನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನವೆಂಬರ್ 22ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಯುವವಾಹಿನಿ ಸುಳ್ಯ ಘಟಕದ ಸ್ಥಾಪಕ ಅಧ್ಯಕ್ಷ ಶಿವಪ್ರಸಾದ್ ಕೆ.ವಿ., ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕ ಲೋಹಿತ್ ರೆಂಜಾಳ ಹಾಗೂ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಗಣ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading