ರಬ್ಬರ್ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಕಲ್ಪಿಸಲು ಆಗ್ರಹ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿಎಲ್) ರಬ್ಬರ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೌಕರರ ರಾಜ್ಯ ವಿಮಾ ಯೋಜನೆ (ಇಎಸ್‌ಐ) ಸೌಲಭ್ಯ ಕಲ್ಪಿಸುವ ವಿಚಾರ ನಿಗಮದ 297ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದಿದೆ ಎಂದು ಕೆಎಫ್‌ಡಿಸಿ ಲೆಬರ್ಸ್ ಯೂನಿಯನ್ ಅಧ್ಯಕ್ಷ ಶರತ್ ತಿಳಿಸಿದರು.

. . . . . . . . .

ಅ. 10ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿ ಸಭೆಯಲ್ಲಿ ರಬ್ಬರ್ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಒದಗಿಸುವಂತೆ ನಡೆಸಿದ ಹೋರಾಟ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆ ಹಾಗೂ ನಿಗಮದ ಕಾನೂನು ಸಲಹೆಗಾರರಿಂದ ಪಡೆದ ಅಭಿಪ್ರಾಯಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು.

. . . . . . .

ರಬ್ಬರ್ ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರ ವೇತನದ ಮಿತಿ, ತಾತ್ಕಾಲಿಕ, ಸಾಂದರ್ಭಿಕ ಹಾಗೂ ಖಾಯಂ ಕಾರ್ಮಿಕರ ಅರ್ಹತೆ ಮತ್ತು ಇಎಸ್‌ಐ ಸೌಲಭ್ಯಕ್ಕೆ ಸಂಬಂಧಿಸಿದ ಕಾನೂನು ನಿಯಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಮಾಸಿಕ ₹21,000ರ ಮಿತಿಯೊಳಗೆ ವೇತನ ಪಡೆಯುವ ಅರ್ಹ ಕಾರ್ಮಿಕರಿಗೆ ಸಂಬಂಧಿತ ನಿಯಮಗಳ ಅನ್ವಯ ಇಎಸ್‌ಐ ಸೌಲಭ್ಯ ಕಲ್ಪಿಸುವ ಸಾಧ್ಯತೆಯ ಬಗ್ಗೆಯೂ ಕಾನೂನು ಅಭಿಪ್ರಾಯದಲ್ಲಿ ಉಲ್ಲೇಖಿಸಲಾಗಿದೆ ಎಂದರು. ಕಾನೂನು ಹೋರಾಟಕ್ಕೆ ಜಯ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಈ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.

*ತೋಟಗಳ ನಿರ್ವಹಣೆಗೆ ಒತ್ತಾಯ* : ರಬ್ಬರ್ ತೋಟಗಳ ನಿರ್ವಹಣೆಯಲ್ಲಿನ ಸಮಸ್ಯೆಗಳ ಅಸಮಾಧಾನ ವ್ಯಕ್ತಪಡಿಸಿದರು. ತೋಟಗಳಲ್ಲಿ ಕಳೆ ಕೀಳುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಜೀವಭಯದ ನಡುವೆ ಕೆಲಸ ಮಾಡುವ ಪರಿಸ್ಥಿತಿ ಕಾರ್ಮಿಕರಿಗೆ ಎದುರಾಗಿದೆ. ರಬ್ಬರ್ ಮರಗಳಿಗೆ ಗೊಬ್ಬರ ಹಾಕುವ ಕಾರ್ಯವೂ ನಡೆಯುತ್ತಿಲ್ಲ. ನಿಗಮದ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಿ, ತೋಟಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ತೋಟ ಮಜ್ದೂರ್ ಸಂಘದ ಅಧ್ಯಕ್ಷ ಸುಂದರ ಲಿಂಗಂ, ಜನರಲ್ ಎಂಪ್ಲಾಯ್ಸ್ ಯೂನಿಯನ್ ಅಧ್ಯಕ್ಷ ಜೀವರತ್ನ ನಾಗಪಟ್ಟಣ, ಪ್ರವೀಣ್ ಸೋಣಂಗೇರಿ, ಶಶಿ ಕುಮಾರ್ ನೆಟ್ಟಾರ್, ಕೋಮಗನ್ ಕ್ರೂಸ್ ಹಾಗೂ ವಿಜಯ ಪ್ರಭು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading