ಗುತ್ತಿಗಾರಿನಲ್ಲಿ ವೆಂಕಟರಮಣ ಸೊಸೈಟಿಯ ಶಾಖೆ ಉದ್ಘಾಟನೆ || “ಸೊಸೈಟಿಯು ಅರ್ಥಿಕ ಚಟುವಟಿಕೆಯ ಜತೆಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ” – ಶಾಸಕಿ ಭಾಗೀರಥಿ ಮುರುಳ್ಯ || “ಪ್ರಾಮಾಣಿಕತೆ ಹಾಗೂ ಕ್ರಿಯಾಶೀಲತೆಯಿಂದ ಸೊಸೈಟಿ ರಾಜ್ಯಕ್ಕೆ ಮಾದರಿ” – ಭರತ್ ಮುಂಡೋಡಿ

“ಸಮಾಜದ ಏಳಿಗೆಗೋಸ್ಕರ ಸಂಘ ಕೆಲಸ ಮಾಡುತ್ತಿದೆ. ಕೇವಲ ಸಾಲ ವಿತರಣೆ ಮಾತ್ರವಲ್ಲದೇ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಆರ್ಥಿಕ ಸಹಕಾರದ ಜೊತೆಗೆ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ವೆಂಕಟರಮಣ ಸೊಸೈಟಿಯು ಇನ್ನಷ್ಟು ಅಭಿವೃದ್ಧಿ ಹೊಂದಲಿ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಗುತ್ತಿಗಾರಿನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

. . . . . . . . .

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲಿಸಿ ಮಾತನಾಡಿ “ಸಂಸ್ಥೆಯ ಆಡಳಿಯ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದ ಇಂದು ಸೊಸೈಟಿ ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕ್ರಿಯಾಶೀಲ ಮತ್ತು ಜವಾಬ್ದಾರಿಯುತ ಕಾರ್ಯದಿಂದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಾಜ್ಯಕ್ಕೆ ಮಾದರಿಯಾಗಿದೆ” ಎಂದರು.

. . . . . . .

ಭದ್ರತಾ ಕೊಠಡಿಯನ್ನು ಕೃಷಿಕ ದೇವಸ್ಯ ಮೋಹನ್ ಗೌಡ ಉದ್ಘಾಟಿಸಿದರು. ಗಣಕೀಕರಣವನ್ನು ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಉದ್ಘಾಟಿಸಿದರು. ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಗುತ್ತಿಗಾರು ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ನೆರವೇರಿಸಿದರು. ಪ್ರಥಮ ಸಾಲ ಪತ್ರ ವಿತರಣೆಯನ್ನು ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ ನೆರವೇರಿಸಿದರು.‌ ಪ್ರಥಮ ಠೇವಣಿ ಪತ್ರ ವಿತರಣೆಯನ್ನು ಕೃಷಿಕರಾದ ಕೆ.ವಿ. ಸುಧೀರ್ ಕೂಜುಗೋಡು ನೆರವೇರಿಸಿದರು.

ಸೊಸೈಟಿ ಅಧ್ಯಕ್ಷರಾದ ಸದಾನಂದ ಕೆ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಮಾಜಿ ಅಧ್ಯಕ್ಷರಾದ ಪಿಸಿ ಜಯರಾಮ್, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಮೋಹನ್ ರಾಮ್ ಸುಳ್ಳಿ, ಪಿ.ಎಸ್.ಗಂಗಾಧರ, ಗುತ್ತಿಗಾರು ಸೊಸೈಟಿ ಮಾಜಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ, ಕ್ರೈಸ್ತ ಅಲ್ಪಸಂಖ್ಯಾತರ ಸೊಸೈಟಿಯ ಉಪಾಧ್ಯಕ್ಷ ಲಿಜೋ ಜೋಸ್, ಗುತ್ತಿಗಾರು ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನ ಮಾಲಕ ನವೀನ್ ಬಾಳುಗೋಡು ಹಾಗೂ ದೇವಿ ಸಿಟಿ ಕಾಂಪ್ಲೆಕ್ಸ್‌ನ ಮಾಲಕ ದೇವಿಪ್ರಸಾದ್ ಚಿಕ್ಕುಳಿ ಹಾಗೂ ಸೊಸೈಟಿ ನಿರ್ದೇಶಕರು, ಸಿಇಓ ಕೆ.ಟಿ.ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ನಿತ್ಯಾನಂದ ಮುಂಡೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರುಷ್ ಕೋಲ್ಚಾರ್ ಪ್ರಾರ್ಥಿಸಿದರು.ದಿನೇಶ್ ಮಡಪ್ಪಾಡಿ ಸ್ವಾಗತಿಸಿ ನಿರ್ದೇಶಕ ದೊಡ್ಡಣ್ಣ ಬರೆಮೇಲು ವಂದಿಸಿದರು. ಸಿಇಓ ಕೆ.ಟಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading