ಬೆಳ್ಳಿಪ್ಪಾಡಿ : ಬೆಂಕಿ ತಗುಲಿ ಮಹಿಳೆ ಮೃತ್ಯು

ಅಡುಗೆ ಮನೆಯಲ್ಲಿ ಬೆಂಕಿ ತಗುಲಿ‌ ಮಹಿಳೆಯೊಬ್ಬರು ಮೃತಪಟ್ಟ ಘಟನೆ ದೇಲಂಪಾಡಿ‌ ಗ್ರಾಮದ ಬೆಳ್ಳಿಪ್ಪಾಡಿಯಿಂದ ಅ.10 ರಂದು ವರದಿಯಾಗಿದೆ.

. . . . . . . . .

ಬೆಳ್ಳಿಪ್ಪಾಡಿ ಹಳೆಮನೆ ಜಯಂತಿ (54) ಎಂಬವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಅಂದು ಅವರ ಸಹೋದರ ದೂರವಾಣಿ ಕರೆ‌ ಮಾಡಿದಾಗ ಜಯಂತಿಯವರು ಕರೆ ಸ್ವೀಕರಿಸದೇ ಇದ್ದುದರಿಂದ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದರು. ಪಕ್ಕದ ಮನೆಯವರು ಜಯಂತಿಯವರ ಮನೆಗೆ ಹೋಗಿ ನೋಡಿದಾಗ ಅವರು ಬೆಂಕಿ ತಾಗಿ ಮೃತಪಟ್ಟಿರುವುದು ಗೊತ್ತಾಯಿತೆನ್ನಲಾಗಿದೆ. ಈ ಬಗ್ಗೆ ಅದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ( ವರದಿ : ವೆಂಕಟೇಶ್ )

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading