ಅ.11ರಂದು ಗುತ್ತಿಗಾರಿನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 25ನೇ ಶಾಖೆ ಉದ್ಘಾಟನೆ

ಸುಳ್ಯದ ಗೌಡರ ಯುವಸೇವಾ ಸಂಘದಿಂದ ಪ್ರವರ್ತಿತ ಶ್ರೀ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 25 ನೇ ಶಾಖೆಯುಅ.11ರಂದು ಗುತ್ತಿಗಾರಿನಲ್ಲಿ ಆರಂಭಗೊಳ್ಳಲಿದೆ.

. . . . . . . . .

ನೂತನ ಗುತ್ತಿಗಾರು ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸೊಸೈಟಿ ಅಧ್ಯಕ್ಷ ಕೆ.ಸಿ. ಸದಾನಂದ ಸಭಾಧ್ಯಕ್ಷತೆ ವಹಿಸಲಿದ್ದು, ಭದ್ರತಾ ಕೊಠಡಿಯನ್ನು ಕೃಷಿಕರಾದ ದೇವಸ್ಯ ಮೋಹನ್ ಗೌಡ ನೆರವೇರಿಸಲಿದ್ದಾರೆ. ಗಣಕೀಕರಣ ಉದ್ಘಾಟನೆಯನ್ನು ದ‌.ಕ. ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಲಿದ್ದಾರೆ. ಪ್ರಥಮ ಪಾಲು ಪತ್ರವನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಪ್ರಥಮ ಪಾಲು ಪತ್ರ ವಿತರಣೆ ಮಾಡಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಗುತ್ತಿಗಾರು ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ನೆರವೇರಿಸಲಿದ್ದಾರೆ. ಪ್ರಥಮ ಸಾಲ ಪತ್ರ ವಿತರಣೆಯನ್ನು ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ ನೆರವೇರಿಸಲಿದ್ದಾರೆ. ಪ್ರಥಮ ಠೇವಣಿ ಪತ್ರ ವಿತರಣೆಯನ್ನು ಕೃಷಿಕರಾದ ಕೆ.ವಿ. ಸುಧೀರ್ ಕೂಜುಗೋಡು ನೆರವೇರಿಸಲಿದ್ದಾರೆ.

. . . . . . .

ಮುಖ್ಯ ಅತಿಥಿಗಳಾಗಿ ಕ್ರೈಸ್ತ ಅಲ್ಪ ಸಂಖ್ಯಾತರ ಸೊಸೈಟಿ ಉಪಾಧ್ಯಕ್ಷ ಲಿಜೋ ಜೋಸ್, ಗುತ್ತಿಗಾರು ಮಹಾಲಕ್ಷ್ಮಿ ಕಾಂಪ್ಲೆಕ್ಸ್ ಮಾಲಕ ನವೀನ್ ಬಾಳುಗೋಡು, ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್ ಚಿಕ್ಕುಳಿ ಭಾಗವಹಿಸಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading