ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನಕ್ಕೆ 100 ಕುರ್ಚಿಗಳು ಹಾಗೂ ಗೋಡ್ರೇಜ್ ಕಪಾಟು ಕೊಡುಗೆ

ಅ.10 ಶನಿವಾರದಂದು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಕ್ಲಬ್‌ನ ಸರ್ವ ಸದಸ್ಯರ ಸಹಕಾರದೊಂದಿಗೆ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನಕ್ಕೆ 100 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ರೋಟರಿಯನ್ ರವೀಂದ್ರಗೌಡ ಅವರು ದೇವಸ್ಥಾನಕ್ಕೆ ಗೋಡ್ರೇಜ್ ಕಪಾಟನ್ನು ಕೊಡುಗೆಯಾಗಿ ನೀಡಿದರು. ಈ ಕೊಡುಗೆಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸುನಿಲ್ ರೈ ಪೆರುವಾಜೆ ಅವರಿಗೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ ಅಧ್ಯಕ್ಷರಾದ ರೋಟರಿಯನ್ ಆರಿಫ್ ಬಿ.ಎಂ. ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಸರ್ವ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ಸೇವೆಯೇ ರೋಟರಿಯ ಧ್ಯೇಯ ಎಂಬ ಆಶಯದೊಂದಿಗೆ ದೇವಸ್ಥಾನದ ಅಗತ್ಯಕ್ಕೆ ಸ್ಪಂದಿಸಿದ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಹಾಗೂ ರೋಟರಿಯನ್ ರವೀಂದ್ರಗೌಡ ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading