ದ್ವಾದಶ ರಾಶಿಗಳ ದಿನಭವಿಷ್ಯ ; ದಿನಾಂಕ :10-10-2026 ; ವಾರ : ಶನಿವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏* 📃,ಇತರರೊಂದಿಗೆ ವಾದ ವಿವಾದಗಳಿಂದ ದೂರವಿರುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ, ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ದೂರ ಪ್ರಯಾಣದಲ್ಲಿ ಅಡೆತಡೆಗಳು ಎದುರಾಗುತ್ತವೆ. ಕೆಲವು ವ್ಯವಹಾರಗಳಲ್ಲಿ, ತಲೆ ನೋವು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಸ್ವಲ್ಪ ಲಾಭದಾಯಕವಾಗಿರುತ್ತವೆ… ಗಮನಿಸಿ:-ಉದ್ಯೋಗಿಗಳಿಗ ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ… ಪರಿಹಾರ:-ಗೋಧಿ ದಾನ ಮಾಡಿ, ಸೂರ್ಯನಿಗೆ ನಮಸ್ಕರಿಸಿ.

. . . . . . .

*02,🐂ವೃಷಭ ರಾಶಿ🐂* 📃,ವೃತ್ತಿ ವ್ಯವಹಾರದಲ್ಲಿ ಗೊಂದಲ ಉಂಟಾಗುತ್ತದೆ. ಪ್ರಮುಖ ವ್ಯವಹಾರಗಳು ಮುಂದೆಸಾಗದೆ ನಿರಾಶೆ ಉಂಟಾಗುತ್ತದೆ. ಮನೆಯಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಪ್ರಯಾಣವನ್ನು ಮುಂದೂಡಲಾಗುತ್ತದೆ. ಉದ್ಯೋಗದಲ್ಲಿ ಕೆಲಸದ ಹೊರೆಯಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ,ನಿಮ್ಮ ಮಾತಿನ ಮೇಲೆ ಇಡಿತವಿರಲಿ… ಗಮನಿಸಿ:- ನೀವಾಡುವಮಾತೆ ನಿಮಗೆ ಮುಳ್ಳಾಗಬಹುದು… ಪರಿಹಾರ:-ತಾಯಿ ದುರ್ಗಾ ದೇವಿ ದರ್ಶನ ಪೂಜೆಗಳಿಂದ ಶುಭವಾಗುವುದು.

*03,👥ಮಿಥುನರಾಶಿ👥* 📃,ಹಠಾತ್ ಪ್ರಯಾಣದ ಸೂಚನೆಗಳಿವೆ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ಮುನ್ನಡೆಯುತ್ತವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿರುತ್ತವೆ ಮತ್ತು ವ್ಯಾಪಾರದಲ್ಲಿ ಗೊಂದಲ ಉಂಟಾಗುತ್ತದೆ… ಗಮನಿಸಿ:-ಉದ್ಯೋಗದಲ್ಲಿ, ಜವಾಬ್ದಾರಿಗಳು ಹೆಚ್ಚಾಗುತ್ತವೆ… ಪರಿಹಾರ:-ನಿಮ್ಮ ಮನೆ ದೇವರ ದರ್ಶನ ಮಾಡಿ.

*04,🦀ಕಟಕ ರಾಶಿ🦀* 📃,ಸಹೋದರರೊಂದಿಗೆ ಸ್ಥಿರಾಸ್ತಿ ವಿಷಯಗಳಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಕುಟುಂಬದ ಸದಸ್ಯರೊಂದಿಗೆ ದೈವಿಕ ದರ್ಶನ ಪಡೆಯುತ್ತೀರಿ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಸ್ನೇಹಿತರೊಂದಿಗೆ ಸಾಮರಸ್ಯದಿಂದ ವ್ಯವಹರಿಸುತ್ತೀರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ… ಗಮನಿಸಿ:-ಉದ್ಯೋಗಿಗಳಿಗೆ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ… ಪರಿಹಾರ:-ವಿಷ್ಣು ಸಹಸ್ರ ನಾಮವನ್ನು ಕೇಳಿ ಸಾಧ್ಯವಾದರೆ ನೀವೆ ಹೇಳಿ.

*05,🦁ಸಿಂಹ ರಾಶಿ🦁* 📃,ಹೊಸ ವಾಹನ ಲಾಭವಿದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ವ್ಯಾಪಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ. ಬಂಧು ಮಿತ್ರರಿಂದ ಬೆಂಬಲ ದೊರೆಯುತ್ತದೆ. ಸಹೋದರರೊಂದಿಗೆ ಸ್ಥಿರಾಸ್ತಿಯ ವಿಷಯಗಳಲ್ಲಿ ಅಡಚಣೆಗಳು ನಿವಾರಣೆಯಾಗುತ್ತವೆ… ಗಮನಿಸಿ:-ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ಸಿಗುತ್ತದೆ… ಪರಿಹಾರ:-ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ.

*06,👩‍🦳ಕನ್ಯಾ ರಾಶಿ👩‍🦳* 📃,ಪ್ರಯಾಣದಲ್ಲಿ ಅಡಚಣೆ ಉಂಟಾಗಬಹುದು. ಆರ್ಥಿಕವಾಗಿ ಸ್ವಲ್ಪ ನಿರಾಸೆಯುಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲಕಾಣುವುದಿಲ್ಲ. ಸಂಬಂಧಿಕರೊಂದಿಗೆ ಅನಿರೀಕ್ಷಿತವಾದ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದ ವಿಚಾರದಲ್ಲಿ ಜವಾಬ್ದಾರಿಗಳು, ಹೆಚ್ಚಾಗುತ್ತವೆ, ಸ್ನೇಹಿತರಿಂದ ಸಹಕಾರ ದೊರೆಯದೆ ಇರಬಹುದು… ಪರಿಹಾರ:-ಪಚ್ಚೆ ಗಣಪತಿ ಆರಾಧನೆಯಿಂದ ವಿಶೇಷ ಫಲ ಪ್ರಾಪ್ತಿಯಾಗುವುದು.

*07,⚖️ತುಲಾ ರಾಶಿ⚖️*📃,ನಿಮ್ಮ ಯೋಜಿತ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ದೈವಿಕ ಚಟುವಟಿಕೆಗಳಲ್ಲಿ, ಭಾಗವಹಿಸುತ್ತೀರಿ. ಹಠಾತ್ ಧನ ಲಾಭ ಸಂಭವ ಮತ್ತು ನಿರುದ್ಯೋಗ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಬಹುದು. ಮನೆಯ ಹೊರಗೆ ಪರಿಚಯಗಳು ಹೆಚ್ಚಾಗುತ್ತವೆ. ವೃತ್ತಿ ಅಥವಾ ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ… ಗಮನಿಸಿ:-ಒತ್ತಡದಿಂದ ಮುಕ್ತಿ ದೊರೆಯುತ್ತದೆ… ಪರಿಹಾರ:-ಸಂಜೆ ವಿಷ್ಣು ಸಹಸ್ರನಾಮ ಪಠಸಿ.

*08,🦂ವೃಶ್ಚಿಕ ರಾಶಿ🦂*📃,ಎಲ್ಲಾ ಕಡೆಯಿಂದ ಆದಾಯ ದೊರೆಯುತ್ತದೆ. ಹೊಸ ವಾಹನಗಳು, ಮತ್ತು ಜಮೀನುಗಳನ್ನು ಖರೀದಿಯ ಬಗ್ಗೆ ಚರ್ಚೆ ಮಾಡುವಿರಿ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆತ್ಮೀಯ ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಹೊಸ ವ್ಯವಹಾರಗಳಿಗೆ ಹೂಡಿಕೆಗಳು ದೊರೆಯಬಹುದು… ಗಮನಿಸಿ:-ಉದ್ಯೋಗದಲ್ಲಿ ಸಮಸ್ಯೆಗಳಿರುತ್ತವೆ… ಪರಿಹಾರ:-ನಿಮ್ಮ ಮನೆದೇವರ ದರ್ಶನ ಮಾಡಿ.

*09,🏹ಧನುಸ್ಸುರಾಶಿ🏹* 📃,ಸಹೋದರರೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳಿರುತ್ತವೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಕೆಲಸದ ಒತ್ತಡದಿಂದ ತಲೆನೋವು ಉಂಟಾಗಬಹುದು ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ವ್ಯವಹಾರಗಳು ನೀರುತ್ಸಾಹಗೊಳಿಸುತ್ತವೆ… ಗಮನಿಸಿ:-ಉದ್ಯೋಗಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ… ಪರಿಹಾರ:- ಶಿವ ಪಂಚಾಕ್ಷರಿ ಮಂತ್ರ ಪಠಿಸಿ.

*10,🐊ಮಕರ ರಾಶಿ🐊*📃,ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ. ಬಂಧು ಮಿತ್ರರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ಸ್ವಲ್ಪ ಬದಲಾವಣೆಗಳಾಗುತ್ತವೆ. ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ, ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ… ಗಮನಿಸಿ:- ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ… ಪರಿಹಾರ:- ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ.

*11,⚱️ಕುಂಭ ರಾಶಿ⚱️*📃,ನೀವು ಬೆಲೆಬಾಳುವ ವಸ್ತ್ರಆಭರಣಗಳನ್ನು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ… ಗಮನಿಸಿ:-ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ… ಪರಿಹಾರ:- ಈ ದಿನ ಸಂಜೆ ನವಗ್ರಹ ಪ್ರದಕ್ಷಿಣೆ ಹಾಕಿ.

*12,🐋ಮೀನ ರಾಶಿ🐋*📃,ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಅನಿರೀಕ್ಷಿತ ಆರ್ಥಿಕ ಲಾಭದ ಸೂಚನೆಗಳಿವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ… ಗಮನಿಸಿ:-ಉದ್ಯೋಗಿಗಳಿಗೆ ವಿಶೇಷ ಮನ್ನಣೆ ದೊರೆಯುತ್ತದೆ… ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading