ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಕೊಡುಗೆಗಳ ಮಹಾಪೂರ

ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಸ್ಥಳೀಯ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಕೊಡುಗೆಗಳ ಮಹಾಪೂರವೇ ಹರಿದು ಬಂದಿದೆ. ಬಸವೇಶ್ವರ ಜೀರ್ಣೋದ್ಧಾರ ಸಮಯದಲ್ಲಿ ಗಣಪತಿ ಗುಡಿಯ ನಿರ್ಮಾಣಕ್ಕೆ 4,01,111/- ದೇವಸ್ಥಾನದ ಒಳಾಂಗಣ ಶಾಶ್ವತ ಮೇಲ್ಚಾವಣಿಯ ಬಗ್ಗೆ 2,57,000/- ದೇವಸ್ಥಾನಕ್ಕೆ ಸೌಂಡ್ ಸಿಸ್ಟಮ್ ಬಗ್ಗೆ 43,000/- ದೇವಳದ ಜೀರ್ಣೋದ್ಧಾರ ಸಮಯ ಮಾಡಿದ ಸಾಲದ ಮರುಪಾವತಿ ಬಗ್ಗೆ ನಗರ ಭಜನೆ ಮಾಡಿ ನೀಡಿದ ಮೊತ್ತ 6,50,000 /- ಗಳಾಗಿವೆ.

. . . . . . . . .

ಇದೀಗ ಪಾಕಶಾಲೆ ನಿರ್ಮಾಣದ ಬಗ್ಗೆ 2,57,000/- ಹಾಗೂ ದೇವಸ್ಥಾನಕ್ಕೆ ಜನರೇಟರ್ ಮತ್ತು ಗ್ರೈಂಡರ್ ಪಾತ್ರೆಗಳಿಗಾಗಿ ನೀಡಿದ ಮೊತ್ತ 2,50,000/- ರೂಪಾಯಿಗಳಾಗಿವೆ. ಒಟ್ಟಾಗಿ ರೂ. 18,58,000/- ಕ್ಕೂ ಮಿಕ್ಕಿ ಕೊಡುಗೆಗಳನ್ನು ಶ್ರೀ ದೇವಳಕ್ಕೆ ನೀಡಲಾಗಿದೆ.

. . . . . . .

ಗುರುವಾರ ಕಲಾವಿದ ಯಜ್ಞೇಶ್ ಆಚಾರ್ ಅವರ ಸಮ್ಮುಖದಲ್ಲಿ ಜನರೇಟರ್ ಹಾಗೂ ಪಾತ್ರ ಪರಿಕರಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಸದಸ್ಯರುಗಳು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರುಗಳು, ವರಮಹಾಲಕ್ಷ್ಮಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು,ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷ ಹಾಗು ಸದಸ್ಯರುಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading