ಬೆಳ್ಳಾರೆ : ಸ್ನೇಹಿತರ ಕಲಾ ಸಂಘದ ಮಹಾಸಭೆ – ಅಧ್ಯಕ್ಷರಾಗಿ ಶ್ರೀನಿವಾಸ ನಾಯ್ಕ ಕುರುಂಬುಡೇಲು, ಕಾರ್ಯದರ್ಶಿ ತೀರ್ಥರಾಮ ಮಣಿಮಜಲು, ಕೋಶಾಧಿಕಾರಿ ಸತೀಶ್ ನಾಯಕ್ ಕಿಲಂಗೋಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ತಡಗಜೆ

ಸ್ನೇಹಿತರ ಕಲಾಸಂಘ ಬೆಳ್ಳಾರೆಯ 2025-26 ರ ಸಾಲಿನ ವಾರ್ಷಿಕ ಮಹಾಸಭೆಯು ಅ. 4ರಂದು ಸಂಘದ ಸಭಾಂಗಣದಲ್ಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

. . . . . . . . .

ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಗಣೇಶ ಪಾಟಾಲಿ ಕುರುಂಬುಡೇಲು ವಾಚಿಸಿದರು. ವಾರ್ಷಿಕ ಜಮಾ ಖರ್ಚು , ಲೆಕ್ಕಪತ್ರವನ್ನು ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ತಡಗಜೆ ಸಭೆಗೆ ಮಂಡಿಸಿದರು.ನಂತರ ಗತ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ , ಸನತ್ ಕಲ್ಲೋಣಿ , ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ , ಮಹಾಲಿಂಗ ಕುರುಂಬುಡೇಲು ಉಪಸ್ಥಿತರಿದ್ದರು.
2026-27ನೇ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀನಿವಾಸ ನಾಯ್ಕ ಕುರುಂಬುಡೇಲು, ಕಾರ್ಯದರ್ಶಿ ತೀರ್ಥರಾಮ ಮಣಿಮಜಲು, ಕೋಶಾಧಿಕಾರಿ ಸತೀಶ್ ನಾಯಕ್ ಕಿಲಂಗೋಡಿ, ನಿಕಟ ಪೂರ್ವ ಅಧ್ಯಕ್ಷರಾಗಿ ವಸಂತ ಗೌಡ ಪಡ್ಪು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ತಡಗಜೆ,ಜೊತೆ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಬೆಳ್ಳಾರೆ , ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹಾಲಿಂಗ ಪಾಟಾಲಿ ಕುರುಂಬುಡೇಲು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶಶಿಧರ ಮಣಿಯಾಣಿ ಬೀಡು, ಗಣೇಶ ಪಾಟಾಲಿ ಕುರುಂಬುಡೇಲು, ನಾರಾಯಣ ಪಾಟಾಲಿ ಬಸ್ತಿಗುಡ್ಡೆ, ಜನಾರ್ಧನ ಪೂಜಾರಿ ಚೀಮುಳ್ಳು,ಸಚಿನ್ ಕುಲಾಲ್ ಬಸ್ತಿಗುಡ್ಡೆ, ಸನತ್ ಕಲ್ಲೋಣಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಪೂರ್ವ ಅಧ್ಯಕ್ಷ ಆನಂದ ಗೌಡ ಪಡ್ಪು ಕಾರ್ಯ ನಿರ್ವಹಿಸಿದರು. ಬಾಲಕೃಷ್ಣ ಪೂಜಾರಿ ತಡಗಜೆ ಸ್ವಾಗತಿಸಿ, ಗಣೇಶ ಪಾಟಲಿ ಕುರುಂಬುಡೇಲು ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading