ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ವಿದ್ಯಾರ್ಥಿ ಪರಿಷತ್‌ ಉದ್ಘಾಟನೆ – “ನಾಯಕತ್ವ ಅಧಿಕಾರ ಅಲ್ಲ, ಸೇವೆಗೆ ಇರುವಂತಹ ಅವಕಾಶ” – ಡಾ. ಸುಬ್ರಹ್ಮಣ್ಯ

ಸುಬ್ರಹ್ಮಣ್ಯ : “ಶಿಕ್ಷಣವು ನಮ್ಮೊಳಗಿನ ಜ್ಞಾನವನ್ನು ಹೊರತರುವ ಪ್ರಯತ್ನವನ್ನು ಮಾಡುತ್ತದೆ. ಶಿಕ್ಷಣ ಪಠ್ಯ ಕೇಂದ್ರೀತವಲ್ಲ, ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗೆ ಅವಕಾಶ ನೀಡುತ್ತದೆ. ನಾಯಕತ್ವ ಎಂಬುದು ಶಿಸ್ತು, ಸಹಕಾರ, ಜವಾಬ್ದಾರಿ, ಸಾಮಾಜಿಕ ಕಾಳಜಿಯ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ವಿದ್ಯಾರ್ಥಿ ಪರಿಷತ್ತು ಸಹಕಾರಿಯಾಗಿದೆ. ನಾಯಕತ್ವ ಅಧಿಕಾರ ಅಲ್ಲ. ಸೇವೆಗೆ ಇರುವಂತಹ ಅವಕಾಶ” ಎಂದು ಪುತ್ತೂರಿನ ಜಿ.ಎಫ್.ಜಿ.ಸಿ. ಬೆಟ್ಟಂಪಾಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಹೇಳಿದರು.

. . . . . . . . .

 ಅವರು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಕಾಲೇಜಿನ 2026ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟಸಿ ಮಾತನಾಡಿದರು. “ನಾಯಕತ್ವವು ತರಬೇತಿ ಕೇಂದ್ರವಾಗಿ, ಜವಾಬ್ದಾರಿಯನ್ನು ಕಲಿಸುವ ಪ್ರಯೋಗಶಾಲೆಯಾಗಿ, ನಾಗರಿಕ ನಿರ್ಮಾಣದ ಪ್ರಜಾಪ್ರಭುತ್ವದ ವೇದಿಕೆಯಾಗಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಪಾದಿಸಬೇಕು” ಎಂದು ಹೇಳಿದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಟಿ ವೈದ್ಯೆ ಸೀತಾರತ್ನ ದೇವ ಹಾಗೂ 2025-26ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತಿಮ ಬಿ.ಎ. ವಿಭಾಗದ ಅರ್ಚನಾ, ಅಂತಿಮ ಬಿ.ಕಾಂ. ವಿಭಾಗದ ನಿಶಾ ಹಾಗೂ ಅಂತಿಮ ಬಿ.ಬಿ.ಎ. ವಿಭಾಗದ ಸಂಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶಶಿ, ಪುಷ್ಪಾ ಡಿ., ಶೃಜನ್ ಮುಂಡೋಡಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಿತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿಶಾ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬಿಪಿನ್ ವಂದಿಸಿದರು. ಸಂಖ್ಯಾ ಹಾಗೂ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading