ಬೆಳ್ಳಾರೆಯಲ್ಲಿ ಅ.10 ರಿಂದ.18 ರ ವರೆಗೆ ನವರಂಗ್-2026

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ, ಜ್ಞಾನದೀಪ‌ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ನಮ್ಮ ಹಬ್ಬ‌ ನಮ್ಮ ಸೇವೆ ಧ್ಯೇಯ ವಾಕ್ಯದಡಿ ನವರಂಗ್-2026 ಎಂಬ ಕಾರ್ಯಕ್ರಮವು ಬೆಳ್ಳಾರೆ ಮತ್ತು ಇತರ ಕಡೆ ನಡೆಯಲಿದೆ. ಅ 10 ರಂದು ಪೂ 10 ಘಂಟೆಗೆ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯ ನವರಂಗ್ ಒಂಬತ್ತು ದಿನ ಒಂಬತ್ತು ಸೇವೆಯ ಉದ್ಘಾಟನೆ ನಡೆಯಲಿದ್ದು, ಹದಿಹರೆಯದ ಮಾನಸಿಕ ಆರೋಗ್ಯ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮನೋ ಸಮಾಲೋಚಕರಾದ ಅನ್ಸಾರ್ ಮುಡಿಪು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.ಅ 11 ರಂದು ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ‌ ಪೂ 10 ಘಂಟೆಗೆ ಶಿಕ್ಷಣ ನವರಂಗ್ ಎಂಬ ವಿಷಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದ್ದು,ಚಿಕ್ಕಮಗಳೂರಿನ ನವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಪ್ರಸಾದ್ ನಾರ್ಣಕಜೆ 

. . . . . . . . .

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.ಅ 12 ರಂದು ಪೂ 10 ಘಂಟೆಗೆ ಬೆಳ್ಳಾರೆ ಜ್ಞಾನದೀಪದಲ್ಲಿ ಸುರಕ್ಷತೆಯ ನವರಂಗ್ ಮಹಿಳೆಯರ ಆತ್ಮರಕ್ಷಣಾ ತರಬೇತಿ ಕಾರ್ಯಕ್ರಮ ನಡೆಯಲಿದ್ದು ಕರಾಟೆ ಶಿಕ್ಷಕರಾದ ಚಂದ್ರಶೇಖರ್ ಕನಕಮಜಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

. . . . . . .

ಅ 13 ರಂದು ಪೂ 10 ರಿಂದ ಪೆರುವಾಜೆಯ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಆಹಾರದ ನವರಂಗ್ ಅನ್ನದಾನದ ಸ್ವಯಂ ಸೇವಕರಾಗಿ ಸೇವೆ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಅ 14 ರಂದು ಪುತ್ತೂರಿನ ಶಿವಸದನ ಹಿರಿಯರ ಮತ್ತು ನಿರ್ಗತಿಕರ ಸೇವಾಶ್ರಮದಲ್ಲಿ ಮಮತೆಯ ನವರಂಗ್ ಹಿರಿಯರೊಂದಿಗೆ ನಾವು ಕಾರ್ಯಕ್ರಮ ನಡೆಯಲಿದೆ. ಅ 15 ರಂದು ಪೂ 10 ಘಂಟೆಗೆ ಬೆಳ್ಳಾರೆಯ ಜ್ಞಾನದೀಪದಲ್ಲಿ ಜ್ಞಾನದ ನವರಂಗ್ ಸ್ವ-ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ ನಡೆಯಲಿದ್ದು ಉಜಿರೆ ರುಡ್ ಸೆಟ್ ನ ಹಿರಿಯ ಉಪನ್ಯಾಸಕರಾದ ಜೇಮ್ಸ್ ಅಬ್ರಹಾಂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. 

ಅ 16 ರಂದು ಪೂ 10 ರಿಂದ ಪರಿಸರದ ನವರಂಗ್ ಸ್ವಚ್ಛತಾ ಕಾರ್ಯಕ್ರಮ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ನಡೆಯಲಿದೆ. ಅ17 ರಂದು ಪಾಶ್ವವಾಯು ಪೀಡಿತ ಬೆಳ್ಳಾರೆ ತಡಗಜೆಯ ಜಯರಾಮ ರೈಯವರಿಗೆ ಆಹಾರದ ಕಿಟ್ ವಿತರಿಸಲಾಗುತ್ತದೆ.ಕಾರ್ಯಕ್ರಮದ ಕೊನೆಯ ದಿನವಾದ ಅ 18 ರಂದು ಬೆಳ್ಳಾರೆ ಜ್ಞಾನದೀಪ 

ಶಿಕ್ಷಣ ಸಂಸ್ಥೆಯಲ್ಲಿ ಅಪರಾಹ್ನ 2 ಘಂಟೆಗೆ ಸಂಕಲ್ಪದ ನವರಂಗ್ ರಕ್ತದಾನ ಮತ್ತು ಕೇಶದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ.ಸುಳ್ಯದ ಯುವಸಾಹಿತಿ ಹಾಗೂ ಅಮೃತಗಂಗಾ ಸೇವಾ ಸಂಸ್ಥೆಯ ಸ್ಥಾಪಕರಾದ ಉದಯ ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading