ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಅ.1ರಂದು ಸವಣೂರಿನಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ತಾಲೂಕು ಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ.

. . . . . . . . .

ಮಹಮ್ಮದ್ ಸಾಬಿತ್ 10ನೇ ತರಗತಿ ವಿದ್ಯಾರ್ಥಿ ಗುಂಡೆಸೆತದಲ್ಲಿ ಪ್ರಥಮ ಸ್ಥಾನ, ಹೃತೇಶ್ ಬಿ.ಎಸ್ ಹತ್ತನೇ ತರಗತಿ ಉದ್ದ ಜಿಗಿತ ದ್ವಿತೀಯ ಸ್ಥಾನ ಮತ್ತು ಆಯುಷ್ ಪಿ. ಗೌಡ 8ನೇ ತರಗತಿ ಇವರು 400 ಮೀ. ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಈ ಮೂವರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಶಿವಪ್ರಸಾದ್ ಆಳ್ವ ಮತ್ತು ಭರತ್ ರವರು ತರಬೇತಿ ನೀಡಿರುತ್ತಾರೆ. ಇವರನ್ನು ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲ ಶಶಿಕಲ ಎಸ್. ಆಳ್ವ ಇವರುಗಳು ಅಭಿನಂದಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading