ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಧನ ಸಂರಕ್ಷಣಾ ಸಪ್ತಾಹ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ (MEA)ಇದರ ಸಹಯೋಗದಲ್ಲಿ “ಕೆವಿಜಿಸಿಇ ಇಂಧನ ಸಂರಕ್ಷಣಾ ಸಪ್ತಾಹ”ವನ್ನು ಸೆ. 27ರಿಂದ ಅ. 3ರವರೆಗೆ ಆಯೋಜಿಸಲಾಯಿತು. 

. . . . . . . . .

ಇಂಧನದ ಸಮರ್ಪಕ ಬಳಕೆ, ಇಂಧನ ಉಳಿತಾಯ ಹಾಗೂ ಮೂಲಭೂತ ಇಂಧನ ಲೆಕ್ಕ ಪರಿಶೋಧನೆಯ ಕುರಿತು ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿಯಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಇಂಧನ ದಕ್ಷತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ 7 ಗುಂಪುಗಳು ಕಾಲೇಜಿನ ಎಲ್ಲಾ ಮಹಡಿ. ಆಫೀಸ್, ಲ್ಯಾಬ್, ಕ್ಲಾಸ್ ರೂಮ್‌ಗಳ ಇಂಧನ ಬಳಕೆಯ ಲೆಕ್ಕಾಚಾರ ಜೊತೆಗೆ ಕಾಸ್ಟ್ ಎಸ್ಟಿಮೇಶನ್ ಸವಿವರವನ್ನು ಮಾಡಿಜಾಗೃತಿ ಸಂದೇಶವನ್ನು ಎಲ್ಲಾ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳಿಗೆ ಘೋಷಣೆ ಮಾಡಿದರು. ಈ ಕಾರ್ಯಕ್ರಮದ ಮೂಲಕ “ಉಳಿತಾಯವೇ ಇಂಧನ ಉತ್ಪಾದನೆಗೆ ಸಮಾನ” ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಭಾರತವು 2070ರ ವೇಳೆಗೆ ನಿವ್ವಳ ಶೂನ್ಯ (Net-zero) ಹೊರಸೂಸುವಿಕೆಯನ್ನು ಸಾಧಿಸುವ ಬದ್ಧತೆಯನ್ನು ಹೊಂದಿದೆ. ಜವಾಬ್ದಾರಿಯುತವಾಗಿ ವಿದ್ಯುತ್ ಬಳಸುವ ಮೂಲಕ ನಾವು ಬಳಸುವ ಪ್ರತಿಯೊಂದು ಯೂನಿಟ್ ವಿದ್ಯುತ್ ಶಕ್ತಿಯು ದೇಶದ ದೀರ್ಘಕಾಲಿನ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಕೊಡುಗೆ ನೀಡುತ್ತದೆ. ಇಂಧನ ಸಂರಕ್ಷಣೆಯನ್ನು ನಮ್ಮ ದೈನಂದಿನ ಅಭ್ಯಾಸವಾಗಿಸೋಣ. “ಇಂದು ಇಂಧನ ಉಳಿಸಿ ಸುಸ್ಥಿರ ನಾಳೆಯನ್ನು ನಿರ್ಮಿಸಿ” ಎಂಬ ಉದ್ದೇಶದಿಂದ ಒಂದು ವಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading