“ವಿಶೇಷ ಸಾಧಕ ಪ್ರಶಸ್ತಿ” ಮುಡಿಗೇರಿಸಿಕೊಂಡ ಗುತ್ತಿಗಾರು ಶ್ರೀಕೃಷ್ಣ ಭಜನಾ ಮಂದಿರ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಿದ 28ನೇ ವರ್ಷದ ಭಜನಾ ಕಮ್ಮಟದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು “ವಿಶೇಷ ಸಾಧಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದರು.

. . . . . . . . .

ಅನೇಕ ಹಿರಿಯರು ಕಟ್ಟಿ ಬೆಳೆಸಿದ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಸುಮಾರು 65 ವರ್ಷಗಳ ಇತಿಹಾಸವಿದ್ದು, ಹಲವಾರು ವರ್ಷಗಳಿಂದ ಮಂದಿರದಲ್ಲಿ ಪ್ರತೀವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಾರ್ಷಿಕ ಭಜನಾ ಕಾರ್ಯಕ್ರಮಗಳು ನೆರವೇರುತ್ತಿದ್ದು, ಮನೆ-ಮನೆ ಭಜನೆಯ ಮುಖಾಂತರ ಧಾರ್ಮಿಕ ಪ್ರಜ್ಞೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಮಕ್ಕಳಿಗೆ ಭಜನಾ ತರಬೇತಿ ಮುಖಾಂತರ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಕೆ, ಮಂದಿರದಲ್ಲಿ ಪ್ರತೀ ಶನಿವಾರ ಭಜನೆ, ವ್ಯಕ್ತಿತ್ವ ವಿಕಸನ ಶಿಬಿರ, ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನಡೆಸುತ್ತಿರುವ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ಮಂಡಳಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಭಜನಾ ಮಂಡಳಿಯ ಎಲ್ಲಾ ಕಾರ್ಯಕ್ರಮಗಳಿಗೆ ವಿಶೇಷವಾಗಿ ತನು-ಮನ-ಧನ ಸಹಕಾರವನ್ನು ನೀಡುತ್ತಿರುವ ಸಮಾಜದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಆಡಳಿತ ಮಂಡಳಿ ತಿಳಿಸಿದೆ.

. . . . . . .

ಈ ವಿಶೇಷ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ರವಿಪ್ರಕಾಶ್ ಬಳ್ಳಡ್ಕ, ಗೌರವ ಸಲಹೆಗಾರರಾದ ಕಿಶೋರ್ ಕುಮಾರ್ ಪೈಕ, ಅಧ್ಯಕ್ಷರಾದ ಪೂರ್ಣಚಂದ್ರ ಪೈಕ, ಕಾರ್ಯದರ್ಶಿಗಳಾದ ಲೀಲಾಧರ್ ಬದಿಯಡ್ಕ, ಖಜಾಂಜಿಗಳಾದ ನಾರಾಯಣ ಕುಚ್ಚಾಲ, ಸದಸ್ಯರಾದ ಲೋಕೇಶ್ವರ ಡಿ.ಆರ್, ರಮೇಶ್ ಮೆಟ್ಟಿನಡ್ಕ, ಜಗದೀಶ್ ಪೈಕ, ಸುಕೇಶ್ ಚಾರ್ಮತ ಹಾಗೂ ಮಹಿಳಾ ಸದಸ್ಯರಾದ ಯಮಿತಾ ಪೂರ್ಣಚಂದ್ರ, ನಾಗವೇಣಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading