ವಿಶ್ವವಿಖ್ಯಾತ ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿಗೆ ಸುಶ್ಮಿತಾ ಉಗ್ರಾಣಿಮನೆ ಆಯ್ಕೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ–2026ರ ಅಂಗವಾಗಿ ನಡೆಯಲಿರುವ ಬಹುರೂಪಿ ಕವಿಗೋಷ್ಠಿಗೆ ಸುಶ್ಮಿತಾ ಉಗ್ರಾಣಿಮನೆ ಆಯ್ಕೆಯಾಗಿದ್ದಾರೆ.

. . . . . . . . .

ಕನ್ನಡದ ಐದು ಛಾಯೆಗಳನ್ನು ಪ್ರತಿಬಿಂಬಿಸುವ ಈ ವಿಶೇಷ ಕವಿಗೋಷ್ಠಿಗಾಗಿ ಕರ್ನಾಟಕದ 31 ಜಿಲ್ಲೆಗಳಿಂದ ಕವನಗಳನ್ನು ಆಹ್ವಾನಿಸಲಾಗಿತ್ತು. ಆಹ್ವಾನಿಸಲಾದ ಕವನಗಳ ಪೈಕಿ ನಡೆದ ಆಯ್ಕೆ ಪ್ರಕ್ರಿಯೆಯ ಮೂಲಕ ಸುಶ್ಮಿತಾ ಉಗ್ರಾಣಿಮನೆ ಅವರು ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.

. . . . . . .

ಕನ್ನಡದ ಐದು ಛಾಯೆಗಳನ್ನು ಪ್ರತಿನಿಧಿಸುವ ಪಂಚ ಕಾವ್ಯಗಳ ರಸದೌತಣ ಅಕ್ಟೋಬರ್ 13ರಿಂದ 17ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣ, ಮಾನಸಗಂಗೋತ್ರಿ ಆವರಣದಲ್ಲಿ ನಡೆಯಲಿದೆ.

ಸುಶ್ಮಿತಾ ಅವರು ಮಂಡೆಕೋಲು ಗ್ರಾಮದ ಬೊಳುಗಲ್ಲು ಉಗ್ರಾಣಿಮನೆ ರಾಮ ಉಗ್ರಾಣಿಮನೆ ಮತ್ತು ಭಾರತಿ ಉಗ್ರಾಣಿಮನೆ ದಂಪತಿಗಳ ಪುತ್ರಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading